ಉಡುಪಿ : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ 5 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸಿ ಸಿಸಿಬಿಯಿಂದ ಈಗಾಗಲೇ ಬಂಧಿತಳಾದ ಆರೋಪಿ ಚೈತ್ರಾ ಕುಂದಾಪುರ ವಿರುದ್ಧ ಕುಂದಾಪುರ ತಾಲೂಕಿನ ಕೋಟ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಮೀನುಗಾರಿಕೆ ಮಾಡಿಕೊಂಡಿದ್ದ ಯುವಕನಿಗೆ ಬಟ್ಟೆ ಅಂಗಡಿ ಇಟ್ಟು ಕೊಡಿಸುವುದಾಗಿ ಹೇಳಿ ಚೈತ್ರಾ ಆತನಿಂದ 5 ಲಕ್ಷ ರೂಪಾಯಿ ಪಡೆದುಕೊಂಡು ವಂಚನೆ ಮಾಡಿದ್ದಾಳೆ ಎಂದು ದೂರುದಾರ ಸುಧೀನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನಗೆ ಬಿಜೆಪಿಯ ಪ್ರಭಾವಿ ಸಚಿವರು ಹಾಗೂ ಶಾಸಕರ ಪರಿಚಯವಿದೆ ನಿಮಗೆ ಬಟ್ಟೆ ಅಂಗಡಿ ಹಾಕಿ ಕೊಡುತ್ತೇನೆ ಎಂದು ನಂಬಿಸಿದ ಚೈತ್ರಾ
ಕೋಟ ನಿವಾಸಿ ಸುಧೀನ್ ನಿಂದ 5 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾಳೆ ಎಂಬ ದೂರು ಆಧರಿಸಿ ಪೊಲೀಸರು ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.ಬಿಜೆಪಿಯ ಸಚಿವರು ಮತ್ತು ಶಾಸಕರು ಪರಿಚಯ ಇದ್ದಾರೆ ಎಂದು ಹೇಳಿ ಚೈತ್ರಾ ವಂಚನೆ ಮಾಡಿದ್ದಾಳೆ.
ಮೀನುಗಾರಿಕೆ ಕೆಲಸ ಮಾಡಿಕೊಂಡಿರುವ ಸುಧಿನ್ ಚೈತ್ರಾಳ ದೂರದ ಸಂಬಂಧಿಯಾಗಿದ್ದು ಆಕೆಯ ವಿರುದ್ಧ ವಂಚನೆ ದೂರು ಸಲ್ಲಿಸಿದ್ದಾರೆ.
ಇನ್ನು ಕಳೆದ ನಾಲ್ಕು ದಿನಗಳ ಹಿಂದೆ ಸಿಸಿಬಿ ಅಧಿಕಾರಿಗಳು ಚೈತ್ರಾಳನ್ನು ವಶಪಡಿಸಿಕೊಂಡಿದ್ದರು ಈ ವೇಳೆ ಆರೋಗ್ಯ ಸಮಸ್ಯೆ ಎಂದು ನಾಲ್ಕು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಳು ಇಂದು ಚೈತ್ರ ಆಸ್ಪತ್ರೆದ ಡಿಸ್ಚಾರ್ಜ್ ಆಗಿದ್ದು ಸಿಸಿಬಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.