Share this news

ಕಾರ್ಕಳ:ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಬೇಟಿ ನೀಡಿ ಪರಶುರಾಮ ಪ್ರತಿಮೆಯ ಕುರಿತು ಅಧಿಕಾರಿಗಳನ್ನು ವಿಚಾರಿಸಿದಾಗ ಪ್ರತಿಮೆಯ ಸತ್ಯಾಸತ್ಯತೆ ಬಯಲಾಗಿದೆ.ಜನರ ಧಾರ್ಮಿಕ ನಂಬಿಕೆಯನ್ನೇ ಬಳಸಿಕೊಂಡು ಕಂಚಿನ ಪ್ರತಿಮೆ ಎಂದು ರಾಜ್ಯದ ಜನತೆಗೆ ಸುಳ್ಳು ಹೇಳಿ ಅದನ್ನೇ ಸತ್ಯ ಎಂದು ನಂಬಿಕೆ ದ್ರೋಹ ಎಸಗಿದವರು ಮತ್ತು ಅದನ್ನು ಸಮರ್ಥಿಸುವವರು ಎಂದೂ ಕ್ಷಮೆಗೆ ಅರ್ಹರಲ್ಲ ಎಂದು ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಹೇಳಿದ್ದಾರೆ.

ಪ್ರತಿಮೆಯ ಕುರಿತು ನಡೆದಿರುವ ತಪ್ಪನ್ನು ಮರೆಮಾಚಲು ಬೈಲೂರು ಗ್ರಾಮದ ಜನರನ್ನು ಎತ್ತಿ ಕಟ್ಟುವ ಪ್ರಯತ್ನಗಳು ನಡೆಯಿತು, ಇದರಿಂದ ಪ್ರೇರಿತರಾಗಿ ಸ್ಥಳಿಯರು ಪ್ರತಿಭಟನೆ, ಪಾದಯಾತ್ರೆಯ ಘೋಷಣೆಯನ್ನೂ ಮಾಡಿದರು, ಪ್ರತಿಮೆಯ ಬಗ್ಗೆ ಪ್ರಶ್ನಿಸಿದವರನ್ನು ಕೆಟ್ಟ, ಅವಮಾನಕರ ಪದಗಳನ್ನು ಬಳಸಿ ನಿಂದಿಸಲಾಯಿತು, ಆದರೆ ಸತ್ಯ ತಡವಾದರು ಬಯಲಾಗಿದೆ ಕೊನೆಗೂ ಸುಳ್ಳಿನ ಗೋಪುರ ಕುಸಿದಿದೆ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬಂತೆ ಅದೇ ಕಂಚಿನ ಪ್ರತಿಮೆ ಎಂದು ನಂಬಿದ್ದ ಜನರು ಮೋಸ ಹೋಗಿದ್ದಾರೆ ಎಂದು ಶುಭದ್ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *