ಕಿನ್ನಿಗೋಳಿ : ಎಕ್ಕಾರು ವಿಜಯ ಯುವ ಸಂಗಮದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ವಿನೋದ್ ಶೆಟ್ಟಿ ಸಂಕೇಶ, ಗೌರವಾಧ್ಯಕ್ಷರಾಗಿ ರತ್ನಾಕರ ಶೆಟ್ಟಿ ಬಾಳಿಕೆ ಮನೆ, ಗೌರವ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ಉಪಾಧ್ಯಕ್ಷರಾಗಿ ರಂಜಿತ್ ಶೆಟ್ಟಿ, ಪ್ರ. ಕಾರ್ಯದರ್ಶಿಯಾಗಿ ಪ್ರವೀಣ್ ಕೆ. ಎಮ್. ಜೊತೆ ಪ್ರ. ಕಾರ್ಯದರ್ಶಿಯಾಗಿ ರೋಯಲ್ ಮಿಸ್ಕಿತ್ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಪವನ್ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಆದಿತ್ಯ ಶೆಟ್ಟಿ ಮಾಡರಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಮಾಡ, ಕ್ರೀಡಾ ಕಪ್ತಾನರಾಗಿ ಉದಯ್ ಶೆಟ್ಟಿ ಸಂಕೇಶ, ಜೊತೆ ಕ್ರೀಡಾ ಕಪ್ತಾನರಾಗಿ ಅವಿನಾಶ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿಶೋರ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಮನೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ
ಶ್ರೀಜಾರಂದಾಯ ದೈವಸ್ಥಾನದಲ್ಲಿ ಸಂಸ್ಥೆಯ ವಾರ್ಷಿಕ ಹೋಮ ಪಂಚಕಜ್ಜಾಯ ಸೇವೆ ನೆರವೇರಿತು.

