ಕಿನ್ನಿಗೋಳಿ : ವಿದ್ಯಾರ್ಥಿ ದೆಸೆಯಲ್ಲಿ ಮನಸ್ಸಿದ್ದೋ ಇಲ್ಲದೆಯೋ ಮಾಡುವ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳು ಮುಂದೆ ನಮ್ಮ ಜೀವನದಲ್ಲಿ ಮಹತ್ವದ ವ್ಯಕ್ತಿತ್ವದ ಬೆಳವಣಿಗೆಗೆ ವಿಶೇಷ ಪಾತ್ರವನ್ನು ವಹಿಸುತ್ತವೆ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರುರವರು ವಿದ್ಯಾರ್ಥಿಗಳಿಗೆ ಹೇಳಿದರು.ಅವರು ಪೊಂಪೈ ಕಾಲೇಜು ಐಕಳದ ‘ಎನ್.ಎಸ್.ಎಸ್ ದಿನ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸೇವಾ ದಿನಾಚರಣೆಯ ಶುಭ ಸಂದರ್ಭದಲ್ಲಿ ಯುವ ಸಮಾಜ ಸೇವಕರಾದ ದೇವಪ್ರಸಾದ್ ಪುನರೂರು ಅವರನ್ನು ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಕೆ.ವಿ.ಯವರು ಅಧ್ಯಕ್ಷತೆಯನ್ನು ವಹಿಸಿದ್ದು, ದೇವಪ್ರಸಾದರು ಸ್ಥಾಪಕಾಧ್ಯಕ್ಷರಾಗಿರುವ ಪುನರೂರು ಪ್ರತಿಷ್ಠಾನದ ಸೇವಾಕಾರ್ಯಗಳನ್ನು ಶ್ಲಾಘಿಸಿದರು.
ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ನೇಮಿಚಂದ್ರ ಗೌಡ ಎಂ., ಸಹ ಅಧಿಕಾರಿ ಶ್ರೀಮತಿ ಆಶಾಲತಾ ಟಿ.ಜಿ., ಘಟಕದ ವಿದ್ಯಾರ್ಥಿ ನಾಯಕ ಯೋಗಾನಂದರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಘಟಕದ ನೇಹಾ ಸ್ವಾಗತಿಸಿ, ಸನ್ನಿಧಿ ವಂದಿಸಿದರು. ಸಾನಿಯಾ ಕಾರ್ಯಕ್ರಮ ನಿರೂಪಿಸಿದರು.
