ಬೆಂಗಳೂರು: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ನವೆಂಬರ್ 15ರ ಬುಧವಾರದಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ಹಾಗೂ ದಕ್ಷಿಣ ಆಫ್ರಿಕಾ ಮತ್ತು ಆಸ್ಟೆçÃಲಿಯಾ ನಡುವೆ ಎರಡನೇ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಈ ಎರಡೂ ಪಂದ್ಯಗಳಿಗೆ ಐಸಿಸಿ ಅಂಪೈಯರ್ ಹಾಗೂ ಮ್ಯಾಚ್ ರೆಫ್ರಿಗಳ ಹೆಸರುಗಳನ್ನು ಪ್ರಕಟಿಸಿದೆ. ಪ್ರಸಕ್ತ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಭಾರತ ಮತ್ತು ನಾಲ್ಕನೇ ಸ್ಥಾನಿ ನ್ಯೂಜಿಲೆಂಡ್ ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 15ರಂದು ಸೆಣಸಾಡಲಿವೆ. ಈ ಹೈ ವೋಲ್ಟೇಜ್ ಪಂದ್ಯಕ್ಕೆ ಇಂಗ್ಲೆAಡ್‌ನ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಆಸ್ಟ್ರೇಲಿಯಾದ ರಾಡ್ ಟಕ್ಕರ್ ಆನ್ ಫೀಲ್ಡ್ ಅಂಪೈರ್‌ಗಳಾಗಿ ಕೆಲಸ ಮಾಡಲಿದ್ದಾರೆ, ವೆಸ್ಟ್ ಇಂಡೀಸ್‌ನ ಜೋ ವಿಲ್ಸನ್ ಮೂರನೇ ಅಂಪೈಯರ್,ಏಡ್ರಿಯನ್ ಹೋಲ್ಡ್ಸ್ಟಾಕ್ ನಾಲ್ಕನೇ ಅಂಪೈಯರ್ ಆಗಿ ಕೆಲಸ ಮಾಡಲಿದ್ದಾರೆ. ಆಂಡಿ ಪೈಕ್ರಾಫ್ಟ್ ಮ್ಯಾಚ್ ರೆಫ್ರಿ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಅಂತರಾಷ್ಟಿçÃಯ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.
ಅಂಕಪಟ್ಟಿಯಲ್ಲಿ ಕ್ರಮವಾಗಿ 3ನೇ ಮತ್ತು 4ನೇ ಸ್ಥಾನ ಪಡೆದ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನವೆಂಬರ್ 16ರಂದು ನಡೆಯಲಿರುವ ಎರಡನೇ ಸಮಿಫೈನಲ್ ಪಂದ್ಯದಲ್ಲಿ ಸೆಣೆಸಲಿವೆ. ಈ ಪಂದ್ಯಕ್ಕೆ ಬ್ರಿಟನ್‌ನ ರಿಚರ್ಡ್ ಕೆಟಲ್‌ಬೊರೊ ಮತ್ತು ಭಾರತದ ನಿತಿನ್ ಮೆನನ್ ಆನ್‌ಫೀಲ್ಡ್ ಅಂಪೈರ್‌ಗಳಾಗಿ ನೇಮಕಗೊಂಡಿದ್ದಾರೆ. ಈ ಪಂದ್ಯಕ್ಕೆ ಕ್ರಿಸ್ ಗ್ಯಾಫನಿ ಮೂರನೇ ಅಂಪೈಯರ್ ಹಾಗೂ ನಾಲ್ಕನೇ ಅಂಪೈರ್ ಆಗಿ ಮೈಕಲ್ ಗಾಫ್ ಆಯ್ಕೆಯಾಗಿದ್ದಾರೆ. ಮ್ಯಾಚ್ ರೆಫ್ರಿಯಾಗಿ ಕನ್ನಡಿಗ ಜಾವಗಲ್ ಶ್ರೀನಾಥ್ ಆಯ್ಕೆಯಾಗಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ನಡೆಯಲಿದೆ. ಬರೋಬ್ಬರಿ 1.30 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ಗೆ ಭಾರತ ಎಂಟ್ರಿ ಕೊಟ್ಟರೆ ಪ್ರೇಕ್ಷಕರ ಗ್ಯಾಲರಿ ಭರ್ತಿಯಾಗಲಿದ್ದು, ಟಿಕೆಟ್ ಬೆಲೆಯಲ್ಲಿ ಭಾರೀ ಏರಿಕೆಯಾದರೂ ಅಚ್ಚರಿಯಿಲ್ಲ.
2009ರಲ್ಲಿ ಭಾರತವನ್ನು ಕಾಡಿದ ಅಂಪೈಯರ್ ಕೆಟಲ್‌ಬೋರೊ ಈ ಬಾರಿಯ ಪಂದ್ಯಕ್ಕಿಲ್ಲ!
ಐಸಿಸಿ ಆಯೋಜನೆಯ ಟೂರ್ನಿಗಳ ನಾಕ್‌ಔಟ್ ಹಂತದ ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಬ್ಯಾಡ್ ಲಕ್ ಎಂದೇ ಗುರುತಿಸಿಕೊಂಡಿರುವ ಅಂಪೈರ್ ರಿಚರ್ಡ್ ಕೆಟಲ್‌ಬೊರೊ ಅವರ ಕಂಟಕ ಭಾರತ ತಂಡಕ್ಕೆ ಈ ಬಾರಿ ದೂರವಾಗಿದೆ. 2019ರ ಭಾರತ-ನ್ಯೂಜಿಲೆಂಡ್ ನಡುವಣ ವಿಶ್ವಕಪ್ ಸೆಮಿಫೈನಲ್‌ನಲ್ಲೂ ಇದೇ ರಿಚರ್ಡ್ ಕೆಟಲ್‌ಬೊರೊ ಅಂಪೈರಿAಗ್ ನಿಭಾಯಿಸಿದ್ದರು. ಆ ಪಂದ್ಯದಲ್ಲಿ 240 ರನ್ ಗುರಿ ಬೆನ್ನತ್ತಿದ್ದ ಭಾರತ 18 ರನ್‌ಗಳ ಸೋಲುಂಡಿತ್ತು. ಇದಕ್ಕೆ ಕೆಟಲ್ ಬೊರೊ ಅವರ ವಿವಾದಾತ್ಮಕ ತೀರ್ಪುಗಳೇ ಕಾರಣವಾಗಿತ್ತು ಎಂಬ ಆರೋಪವಿತ್ತು. ಆದರೆ, ಈ ಬಾರಿ ರಿಚರ್ಡ್ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಸೆಮಿಫೈನಲ್‌ನಲ್ಲಿ ಯಾವುದೇ ರೀತಿಯ ಅಂಪೈರಿAಗ್ ನಿಭಾಯಿಸುತ್ತಿಲ್ಲ ಎಂಬುದು ಅಭಿಮಾನಿಗಳಿಗೆ ನಿಟ್ಟುಸಿರು ತಂದಿದೆ