ನವದೆಹಲಿ: ಭಾರತದಲ್ಲಿ ಟಾಟಾ ವಿಶ್ವಾಸಾರ್ಹ ವಾಹನ ತಯಾರಿಕಾ ಕಂಪನಿಯಾಗಿ ಜನಮನ್ನಣೆ ಗಳಿಸಿದ್ದು ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಇತರ ಕಂಪನಿಗಳಿಗೆ ಹೋಲಿಸಿದರೆ ಮೊದಲ ಸ್ಥಾನದಲ್ಲಿದೆ. ಇದೀಗ ಟಾಟಾ ಕಂಪನಿ ಎಲೆಕ್ಟ್ರಿಕ್ ವಾಹನ ಮಾರಾಟಕ್ಕಾಗಿ ಪ್ರತ್ಯೇಕ ಬ್ರ್ಯಾಂಡ್ ಸ್ಥಾಪಿಸಿದೆ. ಇನ್ನು ಮುಂದೆ ಕಂಪನಿಯ ಪ್ರತಿಯೊಂದು ಎಲೆಕ್ಟ್ರಿಕ್ ವಾಹನಗಳು ಟಾಟಾ ಇವಿ ಬ್ರ್ಯಾಂಡ್ ಅಡಿಯಲ್ಲಿ ಮಾರಾಟವಾಗಲಿವೆ. ಈ ಸಂಬಂಧ ಟಾಟಾ ಹೊಸ ಲೋಗೋ ಲೋಗೋ ಬಿಡುಗಡೆಗೊಳಿಸಿದ್ದು ಅದರಲ್ಲಿ ಮೂವ್ ವಿಥ್ ಮೀನಿಂಗ್ ಎಂಬ ಅಡಿಬರಹವನ್ನು ಬರೆಯಲಾಗಿದೆ.
ನಾವು ಟಾಟಾ ಟಿವಿ ಬ್ರ್ಯಾಂಡ್ ನೊಂದಿಗೆ ನವಯುಗವನ್ನು ಪ್ರವೇಶಿಸುತಿದ್ದೇವೆ. ಮಾಲಿನ್ಯ ರಹಿತ ಶುದ್ಧ ಪರಿಸರ ನಿರ್ಮಾಣಕ್ಕೆ ಎಲೆಕ್ಟ್ರಿಕ್ ವಾಹನಗಳ ಪೂರೈಕೆಯನ್ನು ನಮ್ಮ ಹೊಸ ಬ್ರ್ಯಾಂಡ್ ಮತ್ತಷ್ಟು ವೇಗಗೊಳಿಸುತ್ತದೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಹೇಳಿದ್ದಾರೆ.
ಟಾಟಾದ ಅಗ್ಗದ ಬೆಲೆಯ ಕಾರೆಂದು ಟಿಯಾಗೊ ಇವಿ ಖ್ಯಾತಿಗಳಿಸಿದ್ದು ರೂ. 8.69 ಲಕ್ಷದಿಂದ ರೂ. 12.04 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇದು 19.2 kWh ಹಾಗೂ 24 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, 250 ಕಿಲೋ ಮೀಟರ್ ನಿಂದ 315 ಕಿ.ಮೀ ರೇಂಜ್ ಕೊಡುತ್ತದೆ. ಟಿಗೂರ್ ಇವಿ ವಾಣಿಜ್ಯ ಬಳಕೆಗೆ ರೂ. 12 .49 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಲಿದ್ದು, ಫುಲ್ ಚಾರ್ಜ್ನಲ್ಲಿ 315 ಕಿಲೋಮಿಟರ್ ರೇಂಜ್ ನೀಡುತ್ತದೆ..