ನವದೆಹಲಿ: ಎಲ್ಪಿಜಿ ಸಿಲಿಂಡರ್ಗೆ ಬೆಲೆ 200 ರೂನಷ್ಟು ಕಡಿಮೆ ಆಗಲಿದೆ. 14 ಕಿಲೋ ಎಲ್ಪಿಜಿ ಸಿಲಿಂಡರ್ಗೆ 200 ರೂನಷ್ಟು ಸಬ್ಸಿಡಿ ಒದಗಿಸಲು ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ. ಸದ್ಯ 14 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 1,100 ರೂ ಅಸುಪಾಸಿನಲ್ಲಿ ಇದೆ. ಇದರ ಬೆಲೆ ಸಾವಿರ ರೂ ಒಳಗೆ ಇರಲಿದೆ ಎನ್ನಲಾಗಿದೆ. ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ರೂಪದಲ್ಲಿ ಬೆಲೆ ಇಳಿಕೆ ಸೌಲಭ್ಯ ಸಿಗಲಿದೆ. ಗ್ಯಾಸ್ ಬೆಲೆ ಕಡಿಮೆ ಆಗಿರುವ ಬಗ್ಗೆ ತೈಲ ಮಾರುಕಟ್ಟೆ ಕಂಪನಿಗಳು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಉಜ್ವಲ ಯೋಜನೆ ಅಡಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ 200 ರೂ ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತಿದೆ. ಇದರೊಂದಿಗೆ, ಈ ಸ್ಕೀಮ್ನಲ್ಲಿ 14 ಕಿಲೋ ಎಲ್ಪಿಜಿ ಸಿಲಿಂಡರ್ಗೆ ನೀಡಲಾಗುವ ಒಟ್ಟು ಸಬ್ಸಿಡಿ 400 ರೂ ಆಗುತ್ತದೆ.
ಕೇಂದ್ರ ಸಂಪುಟ ಸಭೆ ಬಳಿಕ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಸ್ಕೀಮ್ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯನ್ನು 200 ರೂನಷ್ಟು ಇಳಿಕೆ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ 2016ರಲ್ಲಿ ಶುರುವಾಗಿದ್ದು, ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಎಲ್ಪಿಜಿ ಕನೆಕ್ಷನ್ ಕೊಡುವ ಉದ್ದೇಶ ಹೊಂದಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಇದರ ಫಲಾನುಭವಿಗಳಾಗಬಹುದು. 5 ಕೋಟಿ ಎಲ್ಪಿಜಿ ಸಂಪರ್ಕ ಕೊಡುವ ಗುರಿ ಇಡಲಾಗಿದೆ.