ಕಾರ್ಕಳ: ಸ್ಕೂಟರಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಅಶ್ವಿನಿ (18) ಎಂಬವರು ಗಾಯಗೊಂಡ ಯುವತಿ. ಅವರು ಶನಿವಾರ ಬೆಳಗ್ಗೆ 10.30 ರ ಸುಮಾರಿಗೆ ತನ್ನ ತಾಯಿ ಆಶಾ ಅವರ ಜತೆ ಸ್ಕೂಟರಿನಲ್ಲಿ ಸಹಸವಾರಿಣಿಯಾಗಿ ಮನೆಯಿಂದ ಎಳ್ಳಾರೆ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಕಡ್ತಲ ಗ್ರಾಮದ ಚೆನ್ನಿಬೆಟ್ಟು ಆದಿರಾ ಫಾರ್ಮ್ ಬಳಿ ಎಳ್ಳಾರೆಕಡೆಯಿಂದ ಚೆನ್ನಿಬೆಟ್ಟು ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಈ ಅಪಘಾತಕ್ಕೆ ಗೂಡ್ಸ್ ವಾಹನ ಚಾಲಕ ಗೋಪಾಲ ಎಂಬವರ ಅತಿವೇಗದ ಚಾಲನೆ ಕಾರಣ ಎನ್ನಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.