Share this news

ಬೆಂಗಳೂರು: 2022-23ನೇ ಸಾಲಿನ ಕರ್ನಾಟಕ ಎಸ್​ಎಸ್​ಎಲ್ ಸಿ(SSLC Results 2023) ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು(ಮೇ 08) ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಶೇ. 83.89 ಫಲಿತಾಂಶ ಬಂದಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಪಾಸಾದ ಒಟ್ಟು ವಿದ್ಯಾರ್ಥಿಗಳು 7,00,619. ಈ ಪೈಕಿ 3,41,108 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, 3,59,511 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಒಟ್ಟು ನಾಲ್ಕು ವಿದ್ಯಾರ್ಥಿಗಳು ಒಟ್ಟು 625 ಅಂಕಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಇನ್ನು ಈ ಬಾರಿ SSLC ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

  • ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಪಾಸಾದ ಬಾಲಕರು 3,41,108
  • SSCL ಪರೀಕ್ಷೆಯಲ್ಲಿ ಪಾಸಾದ ಬಾಲಕಿಯರ ಸಂಖ್ಯೆ 3,59,511
  • SSLC ಫಲಿತಾಂಶದಲ್ಲಿ A ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ-23
  • SSLC ಫಲಿತಾಂಶದಲ್ಲಿ A ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ-23
  • SSLC ಫಲಿತಾಂಶದಲ್ಲಿ ಬಿ ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ 12
  • SSLC ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ

ಮೇ 10ರಂದು ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಮತದಾನಕ್ಕೆ ಎರಡು ದಿನ ಮೊದಲೇ  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ. 11 ಗಂಟೆ ನಂತರ karresults.nic.in ವೆಬ್​​​ಸೈಟ್​ನಲ್ಲಿ ಫಲಿತಾಂಶ ನೋಡಬಹುದಾಗಿದೆ.

Leave a Reply

Your email address will not be published. Required fields are marked *