ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ನಾಳೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ನಡುವೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಎ.1ರಿಂದ ಪೂರ್ವಾನ್ವಯವಾಗುವಂತೆ ಎಲ್ಲಾ ಎಚ್ ಟಿ (HT) ಮತ್ತು ಎಲ್ ಟಿ (LT) ವಿಭಾಗಗಳಿಗೆ ಪ್ರತಿ ಯೂನಿಟ್ಗೆ ಸರಾಸರಿ 70 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದು ಒಟ್ಟಾರೆ ಶೇ. 8.31ರಷ್ಟು ಹೆಚ್ಚಳಕ್ಕೆ ಕಾರಣವಾಗಿದ್ದು, ಹೊಸ ಶುಲ್ಕವು ಏಪ್ರಿಲ್ ತಿಂಗಳಿಂದ ಪೂರ್ವಾನ್ವಯವಾಗಲಿದೆ.
ಕರ್ನಾಟಕದಾದ್ಯಂತ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್‌ಗಳು) ನವೆಂಬರ್ 2022 ರಲ್ಲಿ ಆಯೋಗಕ್ಕೆ ಶುಲ್ಕ ಪರಿಷ್ಕರಣೆ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. 70 ಪೈಸೆ ಹೆಚ್ಚಳದಲ್ಲಿ 57 ಪೈಸೆಯನ್ನು ಫಿಕ್ಸೆಡ್ ಚಾರ್ಜ್ ಮೂಲಕ ಮತ್ತು ಉಳಿದ 13 ಪೈಸೆಯನ್ನು ಇಂಧನ ಶುಲ್ಕವಾಗಿ ಪಡೆಯಲಾಗುತ್ತಿದೆ.



