Share this news

ಕಿನ್ನಿಗೋಳಿ: ಬಿಜೆಪಿ ಕಾರ್ಯಕರ್ತರ ಹಗಲು ರಾತ್ರಿ ಕೆಲಸ ಮಾಡಿದ ಕಾರಣದಿಂದ ಹಾಗೂ ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ನನಗೆ ಗೆಲುವಾಗಿದೆ ಈ ಗೆಲುವು ನನ್ನ ಗೆಲುವಲ್ಲ ಇದು ಕಾರ್ಯಕರ್ತರಿಗೆ ಸಲ್ಲಬೇಕೆಂದು ಮೂಡಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.


ಅವರು ಶನಿವಾರ ಏಳಿಂಜೆ ಬಿಜೆಪಿ ಕಾರ್ಯಕರ್ತರ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ವಿರೋಧ ಪಕ್ಷದವರು ಎಲ್ಲಾ ರೀತಿಯ ಅಪಪ್ರಚಾರ ಮಾಡಿರೂ ಜನ ಅದಕ್ಕೆ ಕಿವಿಗೊಡಲಿಲ್ಲ ನಾನು ಕೂಡ ಯಾವುದೇ ಅಪಪ್ರಚಾರಕ್ಕೆ ನಾನು ಉತ್ತರ ನೀಡಲಿಲ್ಲ, ಎಲ್ಲಾ ದೇವರ ಮೇಲಿಟ್ಟಿದ್ದೇನೆ ವಿರೋದಿಗಳ ಅಪಪ್ರಚಾರವೇ ಅವರಿಗೆ ಮುಳುವಾಯಿತು ಎಂದರು.ನಾನು ಯಾವುದೇ ಜಾತಿ ಧರ್ಮದ ರಾಜಕೀಯ ಮಾಡಿಲ್ಲ, ಎಲ್ಲ ಪಕ್ಷ ಜಾತಿಯವರ ಕೆಲಸ ಮಾಡಿದ್ದೇನೆ ಎಂಬ ಸಮಾಧಾನವಿದೆ, ಇನ್ನಷ್ಟು ಅಭಿವೃದ್ದಿ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು.


ಈ ಸಂದರ್ಭ ನೂತನ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಏಳಿಂಜೆ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಏಳಿಂಜೆ ಲಕ್ಷೀಜನಾರ್ದನ ಮಹಾಗಣಪತಿ ದೇವಸ್ಥಾನದ ಆಡಳಿತ ಮುಕ್ತೇಸರ ಕೊಂಜಾಲಗುತ್ತು ಪ್ರಭಾಕರ ಶೆಟ್ಟಿ, ಪ್ರಧಾನ ಅರ್ಚಕ ವೈ ಗಣೇಶ್ ಭಟ್, ಮಂಡಲಾಧ್ಯಕ್ಷ ಸುನೀಲ್ ಅಳ್ವ, ಕಾರ್ಯದರ್ಶಿ ಕೇಶವ ಕರ್ಕೇರ, ಐಕಳ ಪಂಚಾಯತ್ ಅಧ್ಯಕ್ಷೆ ಸುಗುಣ ಪೂಜಾರ್ತಿ , ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಭುವನಾಭಿರಾಮ ಉಡುಪ, ಅನಿಲ್ ಶೆಟ್ಡಿ ಕೊಂಜಾಲಗುತ್ತು, ವಿನೋದ್ ಬೊಳ್ಳೂರು, ಜೀವನ್ ಪ್ರಕಾಶ್ ಕಾಮರೊಟ್ಟು , ರಶ್ಮೀ ಆಚಾರ್ಯ, ಬಾಸ್ಕರ ಶೆಟ್ಟಿ ಏಳಿಂಜೆ, ಸ್ವರಾಜ್ ಶೆಟ್ಟಿ, ದಿವಾಕರ ಚೌಟ, ದಯೇಶ್ ಐಕಳ, ರವೀಂದ್ರ, ಕಿರಣ್ ಐಕಳ, ಜಯಲಕ್ಷೀ, ಪ್ರಕಾಶ್, ಅನಿತಾ ಡಿಕೊಸ್ತಾ, ಶ್ರೀದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಉಮಾವತಿ , ಪ್ರಕಾಶ್ ಶೆಟ್ಟಿ,ನವ ಚೇತನಾ ಯುವಕ ಮಂಡಲ ಅಧ್ಯಕ್ಷ ಸುಧೀರ್ ಶೆಟ್ಟಿ ಪೊಯ್ಯಮಾರ್, ಮೊಹನ್ ದಾಸ್ ಪಡುಪಣಂಬೂರು, ದೇವಿಪ್ರಸಾದ್ ಶೆಟ್ಟಿ, ಜಯಪಾಲ್ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.
ಚೇತನ್ ಸ್ವಾಗತಿಸಿ ವಂದಿಸಿದರು. ರಘುರಾಮ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *