ನವದೆಹಲಿ: ಒಡಿಶಾದ ಬಾಲಸೋರ್ ನ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಹಿರಿಯ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮಹಾಂತ, ಸೆಕ್ಷನ್ ಇಂಜಿನಿಯರ್ ಮಹಮ್ಮದ್ ಅಮೀರ್ ಖಾನ್, ತಂತ್ರಜ್ಞ ಪಪ್ಪು ಕುಮಾರ್ ಎಂಬವರನ್ನು ಸಿಬಿಐ ಬಂಧಿಸಿದೆ ಎನ್ನಲಾಗಿದೆ.
292 ಮಂದಿಯ ಸಾವಿಗೆ ಕಾರಣವಾಗಿದ್ದ ಭೀಕರ ಒಡಿಶಾ ರೈಲು ದುರಂತ ಪ್ರಕರಣದ ಕುರಿತು ತನಿಖಾ ವರದಿ ತಯಾರಿಸಿದ್ದ ಅಧಿಕಾರಿಗಳು ಸಿಬ್ಬಂದಿ ಲೋಪ ದೋಷವೇ ದುರಂತಕ್ಕೆ ಕಾರಣ ಎಂದು ಉಲ್ಲೇಖಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಐಪಿಸಿ ಸೆಕ್ಷನ್ 304 ರ ಅಡಿ ತಪ್ಪಿತಸ್ಥ ನರಹತ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ. ಅದರಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ದಂಡ ಅಥವಾ ಕಠಿಣ ಸೆರೆವಾಸವನ್ನು ಒಳಗೊಂಡಿರುತ್ತದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.