ಕಟೀಲು: ಆಟಿಯ ಅಂದಿನ ಕಷ್ಠದ ದಿನಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವುದು ಅಭಿನಂದನೀಯ. ಇಂದಿನ ಮಕ್ಕಳಿಗೆ ನಮ್ಮ ಸಂಸ್ಕ್ರತಿಯ ತಿಳುವಳಿಕೆ ಅಗತ್ಯ ಆ ಕೆಲಸವನ್ನು ಹಿರಿಯರಾದ ನಾವು ಮಾಡಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶಿಕ್ಷಣ ಸಂಸ್ಥೆಯ ಶ್ರೀ ವಿದ್ಯಾ ಚಾವಡಿಯಲ್ಲಿ ನಡೆದ ಆಟಿದ ನೆಂಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಜನತೆ ತಮ್ಮ ಹೆತ್ತವರನ್ನು ಅಶ್ರಮದಲ್ಲಿ ಬಿಡುತ್ತಾರೆ ಇದು ತಪ್ಪು ಆ ಕೆಲಸವನ್ನು ನಾವು ಮಾಡಬಾರದು, ನಮ್ಮ ಹಿರಿಯರು ಅವಿದ್ಯಾವಂತರಲ್ಲ ಯಾಕಂದರೆ ಹಿಂದಿನಹಲವು ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳಿವೆ. ನಮ್ಮ ಹಿರಿಯರ ಪರಿಶ್ರಮದಿಂದ ನಮಗೆ ಇಂದು ಉತ್ತಮ ಸ್ಥಾನಮಾನ ಸಿಕ್ಕಿದೆ ಎಂದರು.
ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲೆಯ 100 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದೇವಳದ ಅಸ್ರಣ್ಣ ಬಂಧುಗಳನ್ನು, ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಅವರನ್ನು ಶಿಕ್ಷಕ ಸಾಯಿನಾಥ ಶೆಟ್ಟಿ ಅವರು ಗೌರವಿಸಿದರು. ನಿವೃತ್ತಿಗೊಳ್ಳಲಿರುವ ಶಿಕ್ಷಕ ಸಾಯಿನಾಥ ಶೆಟ್ಟಿ ಮತ್ತು ಸೋಮಪ್ಪ ಅಲಂಗಾರ್ ಅವರನ್ನು ಗೌರವಿಸಲಾಯಿತು.
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಆಶೀರ್ವಾಚನಗೈದರು.
ಈ ಸಂದರ್ಭದಲ್ಲಿ ಅನಂತಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಪ್ರದ್ಯುಮ್ನ ರಾವ್ ಶಿಬರೂರು, ಸಂತೋಷ್ ಕುಮಾರ್ ಹೆಗ್ಡೆ ಎಳತ್ತೂರು, ಕೆ.ಎಂ.ಶೆಟ್ಟಿ ಮಧ್ಯಗುತ್ತು, ರತ್ನಾಕರ ಶೆಟ್ಟಿ ಮುಂಡ್ಕೂರು, ನವೀನ್ ಡಿ ಪಡೀಲ್ ,ಬಿಪಿನಿ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ದೇವಳದ ವಿಶೇಷ ಅಧಿಕಾರಿ ಮೋಹನ್ ರಾವ್, ತ್ಯಾಗರಾಜ ಆಚಾರ್ಯ, ಲೋಕಯ್ಯ ಸಾಲಿಯಾನ್ ಕೊಂಡೆಲಾ ಮತ್ತಿತರರು ಉಪಸ್ಥಿತರಿದ್ದರು.
ಸೋಮಪ್ಪ ಅಲಂಗಾರ್ ಪ್ರಸ್ತಾವನೆಗೈದರು, ವಾದಿರಾಜ ಪಟ್ಟಿ ಸನ್ಮಾನಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.
ಸಾಯಿನಾಥ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ರೋಹಿಣಿ ಶೆಟ್ಟಿ ಮತ್ತು ಪ್ರದೀಪ್ ನಿರೂಪಿಸಿದರು.