ಕಾರ್ಕಳ: ಕಳೆದ 15 ದಿನಗಳಿಂದ ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವ ಪರಿಣಾಮವಾಗಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕುಟುಂಬಗಳು ಜೀವನ ನಿರ್ವಹಣೆ ನಡೆಸಲಾಗದೇ ಪರದಾಡುವಂತಾಗಿದೆ,ಜಿಲ್ಲಾಡಳಿತದ ಜನವಿರೋಧಿ ಧೋರಣೆ ಖಂಡಿಸಿ ಅಕ್ಟೋಬರ್ 3 ರಂದು ಕಟ್ಟಡ ಕಾರ್ಮಿಕರು ಕಾರ್ಕಳ ಅನಂತಶಯನ ವೃತ್ತದಿಂದ ತಾಲೂಕು ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ಅಕ್ಟೋಬರ್3 ರಂದು ಮಂಗಳವಾರ ಬೆಳಗ್ಗೆ ಆರ್, ಸಿ, ಸಿ ಕಟ್ಟಡ ನಿರ್ಮಾಣ ಸಂಘದ ವತಿಯಿಂದ ನಡೆಯುವ ಈ ಪ್ರತಿಭಟನೆಯಲ್ಲಿ ಕಾರ್ಕಳ ತಾಲೂಕಿನ ಸಾವಿರಾರು ಕಾರ್ಮಿಕರು ಭಾಗವಹಿಸಲಿದ್ದಾರೆ.
ಗಣಿಗಾರಿಕೆ ವಿಚಾರದಲ್ಲಿ ಕಾನೂನು ತೊಡಕು ಬಗೆಹರಿಸಲು ಸಾಕಷ್ಟು ಸಮಯಾವಕಾಶ ತಗಲುತ್ತದೆ ಇದರಿಂದ ಬಡ ಕೂಲಿಕಾರ್ಮಿಕರು ಕೆಲಸವಿಲ್ಲದೇ ಬೀದಿಪಾಲಾಗುವುದು ನಿಶ್ಚಿತ.ಆದ್ದರಿಂದ ಬದುಕಿಗಾಗಿ ನಮ್ಮ ಹೋರಾಟ ಅನಿವಾರ್ಯ ಎಂದು ಆರ್.ಸಿ.ಸಿ ಕಟ್ಟಡ ನಿರ್ಮಾಣ ಸಂಘ ಹೇಳಿಕೆಯಲ್ಲಿ ತಿಳಿಸಿದ್ದಾರೆ.