ಮೂಡುಬಿದಿರೆ :ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಕಡಂದಲೆ ಇದರ ಪ್ರಯುಕ್ತ 8ನೇ ವರ್ಷದ ಲಕ್ಷ ಕುಂಕುಮಾರ್ಚನೆ ಹಾಗೂ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ವರಮಹಾಲಕ್ಷ್ಮಿ ಯ ಆಶೀರ್ವಾದ ಪಡೆದರು.ಶಿವಾನಂದ ಶಾಂತಿ ಪೂಜಾ ಕೈಂಕರ್ಯ ನೆರವೇರಿಸಿದರು.
ವ್ರತದಲ್ಲಿ ಇದ್ದ ಮಹಿಳಾ ಭಕ್ತರಿಗೆ ಬಾಲೆ ಎಲೆಯಲ್ಲಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರು ಮಹಿಳಾ ಘಟಕ, ಸೇವಾದಳ, ಹಾಗೂ ಭಜನಾ ಮಂಡಳಿಯ ಅದ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಪಾಲ್ಗೊಂಡಿದ್ದರು.