ಮೂಡಬಿದಿರೆ : ಕಡಂದಲೆ ವಿದ್ಯಾಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಜೆಸಿಐ ಸುರೇಂದ್ರ ಭಟ್ ಪರಿಶ್ರಮದಿಂದ ಪೀಠೋಪಕರಣಗಳ ಹಸ್ತಾಂತರ ಮತ್ತು ಶೂ ವಿತರಣಾ ಕಾರ್ಯಕ್ರಮವು ಜರಗಿತು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆ ಅಮಿತಾ ನಾಯ್ಕ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯವರು, ದ ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಗ್ರಾ.ಪಂ ಸದಸ್ಯ ಜಗದೀಶ್ ಕೋಟ್ಯಾನ್, ಕಾಂತಿ ಉದಯ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಬೆನಿಡಿಕ್ಟ ದಾಂತಿಸ್, ಶಾಲಾಭಿವೃದ್ಧಿ ಸಮಿರಿ ಅಧ್ಯಕ್ಷೆ ಶಿವಾನಿ, ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆ ಪವಿತ್ರ ನಾಯ್ಕ್ ಮಕ್ಕಳಿಗೆ ಕೈತೊಳೆಯುವ ಸ್ವಚ್ಛತೆಯ ತಿಳುವಳಿಕೆ ನೀಡಿದರು.
