Share this news

ಕಾರ್ಕಳ:ಮುಡಾರು ಗ್ರಾಮದ ಕಡಾರಿ ಎಂಬಲ್ಲಿ ಕೊಬ್ಬರಿ ಒಣಗಿಸುವ ಡ್ರೈಯರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ರೂಮ್ ನೊಳಗಿದ್ದ 4 ಟನ್ ಕೊಬ್ಬರಿ ಸುಟ್ಟು ಭಸ್ಮವಾಗಿದ್ದು ರೂ ನಷ್ಟ ಸಂಭವಿಸಿದೆ.
ಕಡಾರಿ ರಮೇಶ್ ಪೂಜಾರಿ ಎಂಬವರಿಗೆ ಸೇರಿದ ಕೊಬ್ಬರಿ ಒಣಗಿಸುವ ಘಟಕದಲ್ಲಿ ಮಂಗಳವಾರ ರಾತ್ರಿ ಸುಮಾರು7.30ರ ವೇಳೆಗೆ ಏಕಾಎಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕೊಬ್ಬರಿ ಒಣಗಿಸಿದ ಡ್ರೈಯರ್ ಗೆ ಹಬ್ಬಿಕೊಂಡ ಪರಿಣಾಮ ಬೆಂಕಿಯ ಕೆನ್ನಾಲಗೆಗೆ ಎಲ್ಲಾ ಕೊಬ್ಬರಿ ಭಾಗಶಃ ಭಸ್ಮವಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಸಂಜೀವ್, ಸಿಬ್ಬಂದಿ ಗಳಾದ ಸುರೇಶ್,ಜಯಮೂಲ್ಯ, ಹಸನ್ ಸಾಬ್, ಸುಜಯ್, ವಿನಾಯಕ್ ಪಾಲ್ಗೊಂಡಿದ್ದರು.

 

 

 

 

 

 

 

 

 

Leave a Reply

Your email address will not be published. Required fields are marked *