ಕಾರ್ಕಳ : ಕಾರ್ಕಳ ತಾಲೂಕಿನ ಕಡ್ತಲ ಎಂಬಲ್ಲಿ ಪಾದಾಚಾರಿ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಪಾದಾಚಾರಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕಡ್ತಲ ಗ್ರಾಮದ ಅಶೊಕನಗರ ನಿವಾಸಿ ಗಣೇಶ್ ಎಂಬವರು ಶುಕ್ರವಾರ ರಾತ್ರಿ 8.30ರ ವೇಳೆಗೆ ದೊಂಡೇರAಗಡಿ ಕಡ್ತಲ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿAದ ಬಂದ ಮಧುಸೂದನ ಶೆಣೈ ಎಂಬವರ ಬೈಕ್ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಪಾದಾಚಾರಿ ಗಣೇಶ್ ಹಾಗೂ ಬೈಕ್ ಸವಾರ ಮಧುಸೂದನ ಶೆಣೈ ಇಬ್ಬರೂ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.