Share this news

ಕಾರ್ಕಳ: ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಜಡ್ಡಿನಕಟ್ಟ ಎಂಬಲ್ಲಿ ಮತ್ತೆ ಗಣಿಗಾರಿಕೆ ಚಟುವಟಿಕೆ ಆರಂಭಗೊಳ್ಳುತ್ತಿದ್ದು ಇದರ ವಿರುದ್ಧ ಸಾರ್ವಜನಿಕರು ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಣಜಾರು ಗ್ರಾಮದ ಸರ್ವೇ ನಂಬ್ರ 169ರಲ್ಲಿನ 26 ಎಕರೆ ಜಮೀನಿನಲ್ಲಿ ಈ ಹಿಂದೆ 2016ರಲ್ಲಿ ಕ್ರಶರ್ ಹಾಗೂ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು. ಸಾರ್ವಜನಿಕರ ವಿರೋಧದ ನಡುವೆಯೂ ಗೋಮಾಳ ಹಾಗೂ ಕೆರೆ ಇರುವ ಪ್ರದೇಶದಲ್ಲಿ ಗಣಿಗಾರಿಕೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ ಎಂದು ಸ್ಥಳೀಯರು ಕ್ರಶರ್ ಸ್ಥಾಪನೆಗೆ ತೀವೃ ವಿರೋಧ ವ್ಯಕ್ತಪಡಿಸಿದ್ದರು.

ಉದ್ದೇಶಿತ ಪ್ರದೇಶದಲ್ಲಿನ 3 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಹಾಗೂ ಕ್ರಶರ್ ಸ್ಥಾಪಿಸಿ ಉದ್ಯಮ ಆರಂಭಿಸಿದ್ದರು. ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸುವಾಗ ಉಂಟಾಗುವ ಸ್ಪೋಟ ಹಾಗೂ ಕ್ರಶರ್ ಧೂಳಿನಿಂದ ಜನಜೀವನಕ್ಕೆ ತೀವೃ ತೊಂದರೆಯಾಗುತ್ತದೆ ಹಾಗೂ ಸಮೀಪದ ಕೆರೆಗೂ ಸಮಸ್ಯೆಯಾಗುತ್ತದೆ ಎಂದು ಸ್ಥಳೀಯರು ಗಣಿಗಾರಿಕೆಯ ವಿರುದ್ಧ ತೀವೃ ಹೋರಾಟ ನಡೆಸಿ ಕೊನೆಗೂ ಜಲ್ಲಿ ಕ್ರಶರ್ ತೆರವುಗೊಳಿಸಿದ್ದರು.ಆದರೆ ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಗಣಿಗಾರಿಕೆಗೆ ಯಾವುದೇ ನಿರ್ಬಂಧ ಇರಲಿಲ್ಲ.

ಇದೀಗ ಮತ್ತೆ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸಿದ್ದತೆಗಳು ಆರಂಭವಾಗಿದ್ದು,ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲವೆಂದು ಗ್ರಾಮಸ್ಥರು ಬಿಗಿಪಟ್ಟು ಹಿಡಿದ್ದಾರೆ.

ಸರ್ವೇ ನಂಬ್ರ 169ರಲ್ಲಿನ ಗಣಿಗಾರಿಕೆ ಪ್ರದೇಶದಲ್ಲಿ ಗೋಮಾಳ ಹಾಗೂ ನೀರಾವರಿ ಕೆರೆಯಿದ್ದು ಇಲ್ಲಿ ಗಣಿಗಾರಿಕೆ ನಡೆಸಿದರೆ ದನಕರುಗಳಿಗೆ ಹಾಗೂ ಕರೆಯ ನೀರು ಕಲುಷಿತವಾಗುತ್ತದೆ ಮಾತ್ರವಲ್ಲದೇ ಗಣಿಗಾರಿಕೆ ಸಂದರ್ಭದಲ್ಲಿ ನಡೆಸುವ ಸ್ಪೋಟದಿಂದ ಶಾಲೆಗೆ ತೆರಳುವ ಮಕ್ಕಳಿಗೆ ಅಪಾಯ ಎದುರಾಗಲಿದೆ ಆದ್ದರಿಂದ ಈಗಾಗಲೇ ಸ್ಥಗಿತಗೊಂಡಿರುವ ಕಲ್ಲು ಗಣಿಗಾರಿಕೆಯನ್ನು ಮತ್ತೆ ಆರಂಭಿಸಲು ನಾವು ಅವಕಾಶ ನೀಡುವುದಿಲ್ಲವೆಂದು ಜಡ್ಡಿನಕಟ್ಟ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂದಾಪುರ ಮೂಲದ ಮಹೇಶ್ ಹೆಗ್ಡೆ ಎಂಬವರು ಗಣಿಗಾರಿಕೆಗೆ ಅನುಮತಿ ಕೋರಿ ಕಲ್ಲು ಗಣಿಗಾರಿಕೆ ನಡೆಸಲು ಮುಂದಾಗಿದ್ದು ಇದಕ್ಕೆ ಸ್ಥಳಿಯರು ಅವಕಾಶ ನೀಡುವುದಿಲ್ಲವೆಂದು ಬಿಗಿಪಟ್ಟು ಹಿಡಿದಿದ್ದಾರೆ. ಆದರೆ ನ್ಯಾಯಾಯಲವು ಗಣಿಗಾರಿಕೆಗೆ ಅನುಮತಿ ನೀಡಿದೆ ಎನ್ನಲಾಗಿದ್ದು, ಕಾರ್ಕಳ ತಹಶೀಲ್ದಾರ್ ಅನಂತಶಂಕರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಈ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ನಿಯಮಬಾಹಿರ ಗಣಿಗಾರಿಕೆಗೆ ಅವಕಾಶವಿಲ್ಲ: ಅನಂತಶಂಕರ ಕಾರ್ಕಳ ತಹಶೀಲ್ದಾರ್ ಕಣಜಾರಿನ ಸರ್ವೇ ನಂಬ್ರ 169ರಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಕೋರಿ ಮಹೇಶ್ ಹೆಗ್ಡೆ ನ್ಯಾಯಾಯಲಯದ ಅನುಮತಿ ಪಡೆದಿದ್ದಾರೆ ಎನ್ನುವ ಮಾಹಿತಿಯಿದೆ, ಆದರೆ ಈ ಪರಿಸರದ ನಿವಾಸಿಗಳು ಗಣಗಾರಿಕೆಯನ್ನು ವಿರೋಧಿಸುತ್ತಿದ್ದಾರೆ. ಪರಿಸರಕ್ಕೆ ಮಾರಕವಾಗುವ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ, ನ್ಯಾಯಾಲಯದ ಆದೇಶ ಪ್ರತಿ ಸಿಕ್ಕ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಅಲ್ಲಿಯವರೆಗೆ ಗಣಿಗಾರಿಕೆ ನಡೆಸದಂತೆ ಸೂಚಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರ್ ಅನಂತಶಂಕರ ಹೇಳಿದ್ದಾರೆ

Leave a Reply

Your email address will not be published. Required fields are marked *