ಬೆಂಗಳೂರು : ಗುಜರಾತ್ ಮೂಲದ ಹಾಲು ಉತ್ಪಾದಕರ ಸಹಕಾರ ಸಂಘ ಅಮೂಲ್ ಕರ್ನಾಟಕದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದನ್ನು ವಿರೋಧಿಸಿ ಕನ್ನಡಿಗರ ವಿರೋಧಿಸುತ್ತಿರುವ ನಡುವೆಯೂ ಅಮೂಲ್ ಕನ್ನಡದಲ್ಲಿಯೇ ಟ್ವೀಟರ್ ಖಾತೆ ಓಪನ್ ಮಾಡಿದೆ.
ಅಮೂಲ್ ಉತ್ಪನ್ನಗಳನ್ನು ವಿರೋಧಿಸಿ ನಡೆಯುತ್ತಿರುವ ಅಭಿಯಾನದ ನಡುವೆಯೂ ಅಮೂಲ್ ಕನ್ನಡದಲ್ಲೇ ಟ್ವಿಟರ್ ಖಾತೆ ಓಪನ್ ಮಾಡಿದ್ದು, ಅಮುಲ್ ನಿಮಗೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು.
ಕಾಯುವಿಕೆ ಇನ್ನೇನು ಮುಗಿದೇ ಹೋಯಿತು. ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ. ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಹೊಸ ತಾಜಾತನವು ನಿಮಗಾಗಿ ಕಾಯುತ್ತಿದೆ! ಎಂದು ಕನ್ನಡದಲ್ಲೇ ಹಲವು ಮಾಹಿತಿಗಳನ್ನು ಪ್ರಕಟಿಸಿದೆ.
ಕರ್ನಾಟಕ ಡೈರಿ ಮಾರುಕಟ್ಟೆಗೆ ಅಮೂಲ್ ಪ್ರವೇಶ ಮಾಡುತ್ತಿರುವುದು ವಿಶೇಷವಾಗಿ ಹೈನುಗಾರರನ್ನು ಆತಂಕಕ್ಕೆ ತಳ್ಳಿದೆ. ಇದು ವಿರೋಧ ಪಕ್ಷಗಳ ನಾಯಕರು ಮತ್ತು ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿದೆ.