Share this news

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ,ಹೆಬ್ರಿ ತಾಲೂಕು ಘಟಕ ಇವರ ಕನ್ನಡ ಡಿಂಡಿಮ ಸರಣಿಯ ನಾಲ್ಕನೆಯ ಕಾರ್ಯಕ್ರಮವು ಶಿವಪುರ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆಯಿತು.

ನಿವೃತ್ತ ಅಧ್ಯಾಪಕರಾದ ನಾರಾಯಣ ಅಡಿಗ ಉದ್ಘಾಟಿಸಿ ಮಾತನಾಡಿ, ಮಾತನಾಡಿ ಮುಂದಿನ ಪೀಳಿಗೆಯವರಾದ ಮಕ್ಕಳಲ್ಲಿ ಕನ್ನಡದ ಪ್ರೀತಿಯನ್ನು ಬೆಳೆಸಿದಾಗ ಕನ್ನಡ ಕಂಪು ಹರಡುತ್ತದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯದ ಕಾರ್ಯ ಶ್ಲಾಘನೀಯ ಎಂದರು.

ಉಪನ್ಯಾಸ ನೀಡಿದ ಡಾ.ಪ್ರವೀಣ ಕುಮಾರ್ ಮಾತನಾಡಿ, ಯಾವುದೇ ಭಾಷೆ ಅದನ್ನು ಮಾತನಾಡುವವರಿಂದ ಬೆಳೆಯುತ್ತದೆ. ಕನ್ನಡದ ಪದಗಳನ್ನು ನಮ್ಮ ದಿನ ನಿತ್ಯದ ಬಳಸಬೇಕು.ಆಗ ಕನ್ನಡದ ಕಂಪು ಹರಡುವುದು ಎಂದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಪ್ರವೀಣ ಕುಮಾರ್ ನಿಯೋಜಿತ ಉಪನ್ಯಾಸ ನೀಡಿದರು.
ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಮಾತನಾಡಿ ,ಹೆಬ್ರಿ ಕಸಾಪ ಘಟಕವು ಕನ್ನಡ ಡಿಂಡಿಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮತ್ತು ಪುಸ್ತಕ ಪ್ರೀತಿಯನ್ನು ಬೆಳೆಸುತ್ತಿದೆ ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಹೆಬ್ರಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ವಹಿಸಿದ್ದರು.

ಶಿವಪುರ ಗ್ರಾ.ಪಂ ಅಧ್ಯಕ್ಷ ರಾದ ಶ್ರೀಮತಿ ಶೋಭಾ ಶೆಟ್ಟಿ, ಉಪಾಧ್ಯಕ್ಷರಾದ ಶಂಕರ ಬಡ್ಕಿಲ್ಲಾಯ, ಜಿಲ್ಲಾ ಕ.ಸಾ.ಪ ಕೋಶಾಧ್ಯಕ್ಷರಾದ ಮನೋಹರ ಪಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಕಳ ತಾಲೂಕು ಅಧ್ಯಕ್ಷರಾದ ರಮಾನಂದ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಶರ್ಮಿಳಾ ,ಕ.ಸಾ.ಪ ಹೆಬ್ರಿ ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ. ಸಾಹಿತ್ಯ ಸಂಘದ ಅಧ್ಯಕ್ಷೆ ವಿದ್ಯಾರ್ಥಿನಿ ಮಾನ್ವಿತಾ ವೇದಿಕೆಯಲ್ಲಿದ್ದರು.

ಕ.ಸಾ.ಪ ಹೆಬ್ರಿ ಘಟಕದ ಪದಾಧಿಕಾರಿ ಶೋಭಾ ಕಲ್ಕೂರ್ ಸ್ವಾಗತಿಸಿ,ಕ.ಸಾಪ ಹೆಬ್ರಿ ಘಟಕದ ಪದಾಧಿಕಾರಿ ವೀಣಾ ಆರ್ ಭಟ್ ವಂದಿಸಿದರು.ಕ.ಸಾಪ ಪದಾಧಿಕಾರಿ ಹರೀಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಅಧ್ಯಾಪಕರಾದ ಗಣೇಶ ಮರಕಾಲ ಅವರು ಬಹುಮಾನ ಪಟ್ಟಿ ವಾಚಿಸಿದರು.

ಕನ್ನಡ ಡಿಂಡಿಮ ಕಾರ್ಯಕ್ರಮದನ್ವಯ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

 

 

Leave a Reply

Your email address will not be published. Required fields are marked *