ಮಂಗಳೂರು : ಮಂಗಳೂರಿನ ಕರಾವಳಿ , ಕೇರಳದ ಹಲವು ಭಾಗದಲ್ಲಿ ಭಾರೀ ಚಂಡಮಾರುತ ಆರ್ಭಟ ಹೆಚ್ಚಾಗಲಿದೆ ಎಂದು ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.
ಇಂದು ರಾತ್ರಿ ಕರಾವಳಿ ಮತ್ತು ಕೇರಳದ ಹಲವೆಡೆ ಎತ್ತರದ ಅಲೆಗಳು ಮತ್ತು ಸಮುದ್ರದ ಅಲೆಗಳು 1.4 ರಿಂದ 2.0 ಮೀಟರ್ ಎತ್ತರದಷ್ಟು ಆರ್ಭಟ ಹೆಚ್ಚಾಗಲಿದೆ. ವೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲದೇ ಸಮುದ್ರ ದಡಗಳಲಿ ವಾಸಿಸುವ ಕರಾವಳಿ ನಿವಾಸಿಗಳು ಸಮುದ್ರ ತೀರಕ್ಕೆ ತೆರಳದಂತೆ ಮುನ್ಸೂಚನೆ ನೀಡಲಾಗಿದೆ.
ಇಂದು ಸಮುದ್ರ ಅಲೆಗಳ ಅಬ್ಬರ ಹೆಚ್ಚಳವಿರುವ ಕಾರಣದಿಂದಾಗಿ ಪ್ರವಾಸಿಗರು ಸ್ನಾನ ಮಾಡುವುದು, ಸಮುದ್ರ ತೀರಗಳಲ್ಲಿ ಆಟ ಆಡುವುದನ್ನು ನಿಷೇಧಿಸಲಾಗಿದೆ. ಮೀನುಗಾರಿಕಾ ಹಡಗುಗಳನ್ನು ಬಂದರಿನಲ್ಲಿ ಸುರಕ್ಷಿತವಾಗಿ ಕಟ್ಟಿ ಇಡಬೇಕು ಎಂಬ ಎಚ್ಚರಿಕೆಯೂ ಇದೆ.