Share this news

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಮೇ.13ಕ್ಕೆ ಫಲಿತಾಂಶ ಪ್ರಕಟಗೊಳ್ಳುವುದು ಬಾಕಿಯಿದೆ. ಈ ವೇಳೆಯಲ್ಲೇ ಈ ಬಾರಿ ರಾಜ್ಯದಲ್ಲಿ ಚುನಾವಣೋತ್ತರ ಸಮೀಕ್ಷೆ ( Exit Poll 2023 )ಯಂತೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಲಿದೆ ಎಂಬುದಾಗಿ ಹಲವು ಸರ್ವೆಗಳ ಫಲಿತಾಂಶ ಪ್ರಕಟವಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ ಸಂಜೆ 6ಕ್ಕೆ ಅಂತ್ಯಗೊಂಡಿದೆ. ಸಂಜೆ 5ಗಂಟೆಯ ವೇಳೆದೆ  ಶೇ.65.69ರಷ್ಟು ಮತದಾನ ನಡೆದಿದೆ. ಮತದಾನ ಮುಕ್ತಾಯಗೊಂಡ ನಂತರ  ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಬಗ್ಗೆ ಚುನಾವಣೋತ್ತರ ಸಮೀಕ್ಷಾ ವರದಿಯನ್ನು ಪ್ರಕಟಿಸಿವೆ. ಪ್ರಕಟಿತ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಗಳಿಸಿದರೂ, ಅತಂತ್ರ ಫಲಿತಾಂಶ ಬರುವ ಸಾಧ್ಯತೆಯನ್ನು ಎಲ್ಲಾ ಸಮೀಕ್ಷೆಗಳು ಹೇಳಿದ್ದಾರೆ.

ಹೀಗಿದೆ ಚುನಾವಣೋತ್ತರ ಸಮೀಕ್ಷೆಯಂತೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಗೆಲುವು ಮಾಹಿತಿ:

ಸಿ-ವೋಟರ್ ಸಮೀಕ್ಷೆ: ಬಿಜೆಪಿ 83-95, ಕಾಂಗ್ರೆಸ್ ಪಕ್ಷ 100-112 ಸ್ಥಾನ, ಜೆಡಿಎಸ್ ಪಕ್ಷ 21-29, ಇತರೆ 02-6 ಸ್ಥಾನ

ರಿಪಬ್ಲಿಕ್ PMARQ: ಬಿಜೆಪಿ 85-100, ಕಾಂಗ್ರೆಸ್ 94-108, ಜೆಡಿಎಸ್ 24-32, ಇತರೆ 2-6

ಜೀ ನ್ಯೂಸ್-ಮ್ಯಾಟ್ರೈಜ್ :ಕಾಂಗ್ರೆಸ್ 103 ರಿಂದ 118 ಸ್ಥಾನ, ಬಿಜೆಪಿ 79 ರಿಂದ 94 ಸ್ಥಾನ

ಟಿವಿ9 ಭಾರತ್ ವರ್ಷ ಪೋಲ್ ಸ್ಟಾರ್ಟ್ : ಬಿಜೆಪಿ -88-98, ಕಾಂಗ್ರೆಸ್ 99-109, ಜೆಡಿಎಸ್ – 21-26, ಇತರೆ 04

ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆ : ಬಿಜೆಪಿ 94-117, ಕಾಂಗ್ರೆಸ್ 91-106, ಜೆಡಿಎಸ್ 14-24, ಇತರೆ 0-2

ಟೈಮ್ಸ್ ನೌ ಎಕ್ಸಿಟ್ ಪೋಲ್ : ಬಿಜೆಪಿ 78-92,ಕಾಂಗ್ರೆಸ್ 106-120,ಜೆಡಿಎಸ್ 20-26,ಇತರೆ 2-4

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಮುನ್ನಡೆಯನ್ನು ಸಾಧಿಸಲಿದೆ. 19 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಬಿಜೆಪಿ 104 ಸ್ಥಾನವನ್ನು ಗಳಿಸಿತ್ತು. ಕಾಂಗ್ರೆಸ್ 80 ಸೀಟ್ ಗೆದ್ದಿತ್ತು. ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ 37 ಸ್ಥಾನ ಗೆದ್ದರೇ, ಇತರೆ 3 ಸ್ಥಾನವನ್ನು ಗೆದ್ದಿದ್ದರು.  ಈ ಆದರೆ ಬಾರಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ  ಬಾರದೇ, ಅತಂತ್ರ ಸಾಧ್ಯತೆಯನ್ನು ಎಲ್ಲಾ ಸಮೀಕ್ಷೆಗಳು ಹೇಳುತ್ತಿವೆ. ಒಟ್ಟಿನಲ್ಲಿ ಈ ಬಗ್ಗೆ ಆ ಬಗ್ಗೆ ಮೇ.13ರ ಫಲಿತಾಂಶದ ಬಳಿಕ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ.

Leave a Reply

Your email address will not be published. Required fields are marked *