Share this news

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಮೇ 10 ದಿನಾಂಕ ನಿಗದಿ ಮಾಡಲಾಗಿದೆ. ಆದರೆ, ಹಿರಿಯ ನಾಗರಿಕರು ಹಾಗೂ ಅಂಗವಿಕಲರು ನಾಳೆಯಿಂದಲೇ (ಶನಿವಾರ) ಮತದಾನ ಮಾಡಲಿದ್ದಾರೆ. ಹೀಗೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 9 ಸಾವಿರ ಜನರು ಏ.29ರಿಂದ ಮತ ಚಲಾಯಿಸಲಿದ್ದಾರೆ.

ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ನಾಗರಿಕರು, ಅಂಗವಿಕಲರು ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಅದೂ ಅಧಿಕಾರಿಗಳು ಅವರ ಮನೆಗೆ ತೆರಳಿ ಬ್ಯಾಲೆಟ್‌ ಪೇಪರ್‌ ನೀಡಿ, ಮತಚಲಾಯಿಸುವಂತೆ ಮಾಡುತ್ತಿದ್ದಾರೆ. ಏ.29ರಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 6ರವರೆಗೆ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ. 8 ದಿನಗಳಲ್ಲಿ ಅಧಿಕಾರಿಗಳು ಯಾವಾಗಲಾದರೊಮ್ಮೆ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿರುವ ಹಿರಿಯ ನಾಗರೀಕರು ಮತ್ತು ವಿಕಲ ಚೇತನ ಮತದಾರರ ಮನೆಗೆ ತೆರಳು ಬ್ಯಾಲೆಟ್‌ ಪೇಪರ್‌ ನೀಡಿ, ಮತ ಚಲಾಯಿಸಿದ ನಂತರ ಅದನ್ನು ವಾಪಾಸು ಪಡೆದುಕೊಂಡು ತೆರಳಲಿದ್ದಾರೆ.

Leave a Reply

Your email address will not be published. Required fields are marked *