ವಿಜಯನಗರ:ಕರ್ನಾಟಕ ಸಂಭ್ರಮ-50’ರ ಕಾರ್ಯಕ್ರಮವು ನವೆಂಬರ್ 2ರಂದು ಗುರುವಾರ ಸಂಜೆ ಹಂಪಿಯಲ್ಲಿ ಆರಂಭವಾಗಲಿದ್ದು, ವಿರೂಪಾಕ್ಷನಿಗೆ ಹಾಗೂ ನಾಡ ದೇವತೆ ಭುವನೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ದೇವರಾಜ ಅರಸು ಅವರು 50 ವರ್ಷಗಳ ಹಿಂದೆ ಬೆಳಗಿದ್ದ ದೀಪದಲ್ಲೇ ಸಿದ್ದರಾಮಯ್ಯ ಅವರೂ ಜ್ಯೋತಿ ಬೆಳಗಲಿದ್ದಾರೆ ಹಾಗೂ ರಾಜ್ಯಕ್ಕೆ ಸಂದೇಶ ನೀಡಲಿದ್ದಾರೆ.
‘ಜ್ಯೋತಿ ರಥಯಾತ್ರೆ’ಗೆ ಸಂಜೆ 7 ಗಂಟೆಗೆ ಚಾಲನೆ ಸಿಗಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಸಾಧು ಕೋಕಿಲ ತಂಡದಿಂದ ಕನ್ನಡ ಗೀತೆಗಳ ಗಾಯನ ಹಾಗೂ ರಸಮಂಜರಿ ನಡೆಯಲಿದೆ.
ಜ್ಯೋತಿ ರಥಯಾತ್ರೆ ಇಲ್ಲಿಂದ ಆರಂಭವಾಗಿ ಗದಗ ಜಿಲ್ಲೆಗೆ ತೆರಳಿ ಬಳಿಕ ರಾಜ್ಯದೆಲ್ಲೆಡೆ ಸಂಚರಿಸಲಿದೆ.