ಕಾರ್ಕಳ: ಬೈಕ್ ಹಾಗೂ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ರೋಹಿತ್(34) ಎಂಬವರು ಗಾಯಗೊಂಡಿದ್ದಾರೆ. ಬೈಕ್ ಸವಾರ ರೋಹಿತ್ ಎಂಬವರು ಬುಧವಾರ ಬೆಳಗ್ಗೆ ತನ್ನ ಮನೆಯಾದ ಕಲ್ಯಾದಿಂದ ಪಳ್ಳಿ ಕಡೆಗೆ ಕೆಲಸಕ್ಕೆಂದು ಬೈಕಿನಲ್ಲಿ ಹೋಗುತ್ತಿದ್ದಾಗ ಕೈರಬೆಟ್ಟು ನೆಲ್ಲಿಗುಡ್ಡೆ ರಸ್ತೆಯಿಂದ ರಿಕ್ಷಾ ಚಾಲಕ ಪ್ರಶಾಂತ ಎಂಬವರು ಅತೀವೇಗವಾಗಿ ತನ್ನ ರಿಕ್ಷಾವನ್ನು ಚಲಾಯಿಸಿಕೊಂಡು ನಿಯಂತ್ರಣತಪ್ಪಿ ರೋಹಿತ್ ಅವರ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಿಂದ ಬೈಕ್ ಸವಾರ ರೋಹಿತ್ ಅವರ ಕಾಲಿನ ಪಾದದ ಮೂಳೆ ಮುರಿತವಾಗಿ, ಕೈಹಾಗೂ ಭುಜಕ್ಕೆ ತರಚಿದ ಗಾಯಗಳಾಗಿವೆ.
ರಿಕ್ಷಾ ಚಾಲಕ ಪ್ರಶಾಂತ್ ಅವರ ವೇಗ ಹಾಗೂ ನಿರ್ಲಕ್ಷö್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





