ಬೆಂಗಳೂರು: ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳ್ಳುತ್ತಿದೆ. ಜೂನ್ 11 ರಂದು ಶಕ್ತಿ ಯೋಜನೆ ಮೂಲಕ ಕಾಂಗ್ರೆಸ್ ಉಚಿತ ಗ್ಯಾರಂಟಿ ಯೋಜನೆಗಳು ಒಂದೊAದೆ ಜಾರಿಯಾಗಲಿದೆ. ಆದರೆ ಕಾಂಗ್ರೆಸ್ ಉಚಿತ ಗ್ಯಾರಂಟಿಯಿAದ ರಾಜ್ಯದ ಬೊಕ್ಕಸ ಬರಿದಾಗುತ್ತಿದ್ದು, ಆದಾಯ ಮೂಲಕ ಕ್ರೋಡಿಕರಿಸಲು ಸಿಕ್ಕ ಸಿಕ್ಕ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ಉಚಿತದ ನೆಪದಲ್ಲಿ ಇದೀಗ ವಿದ್ಯುತ್ ಬೆಲೆ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್ ನೀಡಿದ್ದು, ಆದಾಯ ಸಂಗ್ರಹಿಸಲು ಸರ್ಕಾರ ಶೇಕಡಾ 20 ರಷ್ಟು ಮದ್ಯದ ಬೆಲೆ ಏರಿಕೆ ಮಾಡಿದೆ.
ಬಿಯರ್ ಮೇಲೆ ಶೇಕಡಾ 20 ರಷ್ಟು ತೆರಿಗೆ ವಿಧಿಸಲಾಗಿದ್ದು, ಈ ಮೂಲಕ ಬಿಯರ್ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಹರಿದು ಬರಲಿದೆ. ಕೇವಲ ಬಿಯರ್ ಮಾತ್ರವಲ್ಲ, ಇತರ ಮದ್ಯದ ಮೇಲೂ ತೆರಿಗೆ ವಿಧಿಸಲಾಗಿದೆ. ಬಿಯರ್ ಹೊರತು ಪಡಿಸಿ ಇತರ ಮದ್ಯದ ಬೆಲೆಯನ್ನು ಶೇಕಡಾ 15 ರಷ್ಟು ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 3,000 ಕೋಟಿ ರೂಪಾಯಿ ಹರಿದು ಬರಲಿದೆ. ಇಷ್ಟಕ್ಕೇ ರಾಜ್ಯ ಸರ್ಕಾರದ ಆದಾಯ ಕ್ರೋಡಿಕರಣ ನಡೆ ಮುಗಿದಿಲ್ಲ. ಮದ್ಯ ಲೈಸೆನ್ಸ್ ಶುಲ್ಕ ಹೆಚ್ಚಿಸಲಾಗಿದೆ. ಲಿಕ್ಕರ್ ಲೈಸೆನ್ಸ್ ಫೀಯನ್ನು ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ. 2016 ರಿಂದ ಲಿಕ್ಕರ್ ಲೈಸೆನ್ಸ್ ದರ ಹೆಚ್ಚಿಸಿಲ್ಲ. ಹೀಗಾಗಿ ಶೇಕಡಾ 25 ರಷ್ಟು ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಈ ಮೂಲಕ ವಾರ್ಷಿಕ 175 ಕೋಟಿ ರೂಪಾಯಿ ಆದಾಯ ಕ್ರೋಡಿಕರಿಸಲು ಮುಂದಾಗಿದೆ.
2023-24 ರ ವಾರ್ಷಿಕದಲ್ಲಿ ಈಗಾಗಲೇ 35 ಸಾವಿರ ಕೋಟಿ ಆದಾಯದ ಟಾರ್ಗೆಟ್ ಮಾಡಲಾಗಿದೆ. 39 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನು 4 ಸಾವಿರ ಕೋಟಿಗೆ ಇತರ ವಸ್ತುಗಳ ಬೆಲೆ ತೆರಿಗೆ ವಿಧಿಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ಈ ನಡೆಯನ್ನು ಮದ್ಯಪ್ರಿಯರು ವಿರೋಧಿಸಿದ್ದಾರೆ. ಮದ್ಯಪ್ರಿಯರ ಸಂಘಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಯಾರಿಗೋ ಉಚಿತ ನೀಡಲು ಹೋಗಿ ಮದ್ಯದ ಮೇಲೆ ಯಾಕೆ ಬರೆ ಎಳೆಯುತ್ತಿದ್ದೀರಿ. ರಾಜ್ಯದ ಬೊಕ್ಕಸ ಕಾಲಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದು ಯಾಕೆ ಎಂದು ಮದ್ಯಪ್ರಿಯರ ಸಂಘದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.