ಕಾರ್ಕಳ: ಆಂತರಿಕ ಕಚ್ಚಾಟ ಕಾಂಗ್ರೆಸ್ ಪಕ್ಷಕ್ಕೆನೂ ಹೊಸತಲ್ಲ,ಇವತ್ತಿನವರೆಗೂ ದೇಶದಲ್ಲಿ ಆಂತರಿಕ ಕಚ್ಚಾಟದಿಂದಲೇ ಖ್ಯಾತಿಪಡೆದ ಪಕ್ಷ ಕಾಂಗ್ರೆಸ್ ತನ್ನ ಪಕ್ಷದೊಳಗಿನ ಕಚ್ಚಾಟವನ್ನು ಸರಿಪಡಿಸುವುದನ್ನು ಬಿಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಹೇಳಿದ್ದಾರೆ.
ಚುನಾವಣೆಗೆ ನಿಮ್ಮಲ್ಲಿ ಎಷ್ಟು ಜನ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳು ಇದ್ದಾರೆಂದು ಖಚಿತಪಡಿಸಿಕೊಳ್ಳಿ ಅದನ್ನು ನಿಮ್ಮ ಪಕ್ಷದ ಆಂತರಿಕ ಮಟ್ಟದಲ್ಲಿ ಕುಳಿತು ಬಗೆಹರಿಸಿಕೊಳ್ಳಬೇಕೇ ಹೊರತು ಅದನ್ನು ಸಮಾಜದ ಮುಂದೆ ತಂದು ಬೀದಿ ರಂಪ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಚುನಾವಣೆಯ ಸಂದರ್ಭದಲ್ಲಿ ಗೋಪಾಲ ಭಂಡಾರಿಯವರ ಹೆಸರನ್ನು ಉಲ್ಲೇಖಿಸುವ ಕಾರ್ಕಳ ಕಾಂಗ್ರೆಸ್, ಅಂದು ಅವರು ಜೀವಂತವಿರುವಾಗಲೇ ಅವರ ಅಂತಿಮ ಯಾತ್ರೆ ಮಾಡಿದ ಕೀರ್ತಿ ಇದೇ ಕಾರ್ಕಳ ಕಾಂಗ್ರೆಸ್ಸಿಗೆ ಸಲ್ಲುತ್ತದೆ.ಚುನಾವಣೆಯನ್ನು ಎದುರಿಸಲು ದಾರಿ ಕಾಣದೆ ಕಂಗೆಟ್ಟಿದ್ದ ಕಾರ್ಕಳ ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ತನ್ನ ಬಿ ಟೀಮನ್ನು ಹುಟ್ಟುಹಾಕಿ ಕಾರ್ಕಳದಲ್ಲಿ ಅಪಪ್ರಚಾರದ ಮೂಲಕ ಕಾರ್ಕಳದ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ. ಕಾಂಗ್ರೆಸ್ಸಿನ ಎ ಟೀಮ್ ಮತ್ತು ಬಿ ಟೀಮ್ ಗಳು ಈ ಬಾರಿ ಅಪಪ್ರಚಾರದಲ್ಲಿಯೇ ಮುಂದಿನ ಎರಡು ತಿಂಗಳಗಳನ್ನು ಕಳೆಯಲಿದೆ.
ಅಂದು ಜನರು ತೀರಾ ಸಂಕಷ್ಟದಲ್ಲಿದ್ದ ಕೊರೋನ ಸಂದರ್ಭದಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕನಾಗಲಿ, ಕಾರ್ಯಕರ್ತನಾಗಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು, ತನ್ನ ಮನೆಯಿಂದಲೆ ಹೊರಗೆ ಬಂದಿರಲಿಲ್ಲ. ಇದು ಕಾರ್ಕಳದ ಜನತೆಗೆ ತಿಳಿದಿರುವ ವಿಷಯ.ಬಿಜೆಪಿ ಆಡಳಿತದಲ್ಲಿ ಕಾರ್ಕಳ ಕ್ಷೇತ್ರದಾದ್ಯಂತ ನಡೆಯುತ್ತಿರುವ ಅಭಿವೃದ್ಧಿಯನ್ನು ಸಹಿಸದ ಕಾರ್ಕಳ ಕಾಂಗ್ರೆಸ್ ಅಪಪ್ರಚಾರದ ಮೊರೆ ಹೋಗಿದೆ. ಇಂತಹ ಕೀಳುಮಟ್ಟದ ಚುನಾವಣಾ ತಂತ್ರಗಳನ್ನು ಬಿಟ್ಟು ಕಾಂಗ್ರೆಸ್ ತನ್ನ ಪಕ್ಷದ ಆಂತರಿಕ ಕಚ್ಚಾಟವನ್ನು ನಿಮ್ಮೊಳಗೆಯೇ ಬಗೆಹರಿಸಿ ಸಾರ್ವಜನಿಕವಾಗಿ ಗೌರವ ಉಳಿಸಿಕೊಳ್ಳಿ ಎಂದು ನವೀನ್ ನಾಯಕ್ ಸಲಹೆ ನೀಡಿದರು.