ಅಜೆಕಾರು:ಮರ್ಣೆ ಗ್ರಾಮದ ಕಾಡುಹೊಳೆ ಕೋಟೆಬೈಲು ಸಮೀಪದ ಸ್ಮಶಾನದ ಬಳಿ ಸ್ಕೂಟರಿಗೆ ಹಿಂಬದಿಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿ ಮೂವರಿಗೆ ಗಾಯಗಳಾದ ಘಟನೆ ಸಂಭವಿಸಿದೆ.
ಕಳೆದ ಶುಕ್ರವಾರ ಸಂಜೆ ಈ ಅಪಘಾತ ಸಂಭವಿದ್ದು, ಅಜೆಕಾರು ಕೊಂಬಗುಡ್ಡೆ ನಿವಾಸಿ ನೀತಾ (28) ಎಂಬವರು ತನ್ನ ತಂದೆ ಮಹಾಬಲ ಮಡಿವಾಳ ಎಂಬವರ ಸ್ಕೂಟರಿನಲ್ಲಿ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವಾಗ ಸ್ಮಶಾನದ ಎಡಬದಿಯ ರಸ್ತೆಗೆ ಸ್ಕೂಟರ್ ತಿರುಗಿಸುತ್ತಿದ್ದಾಗ ಅಜೆಕಾರು ಕಡೆಯಿಂದ ಗಣೇಶ ಎಂಬವರು ತನ್ನ ಬೈಕನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ನಿಯಂತ್ರಣತಪ್ಪಿ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ಬೈಕ್ ಸವಾರ ಗಣೇಶ, ಮಹಾಬಲ ಮಡಿವಾಳ ಹಾಗೂ ನೀತಾ ಗಾಯಗೊಂಡಿದ್ದಾರೆ.ಬೈಕ್ ಸವಾರನ ಅತೀವೇಗದ ಚಾಲನೆಯಿಂದ ಈ ಅಪಘಾತ ಸಂಭವಿಸಿದ್ದು, ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರಂಗ: ಬೈಕ್ ಸ್ಕಿಡ್ಡಾಗಿ ಬೈಕ್ ಅಪಘಾತ: ಮಗು ಸಹಿತ ಮೂವರಿಗೆ ಗಾಯ
ಹೆಬ್ರಿ: ವರಂಗ ಗ್ರಾಮದ ಕೆಲ್ಟೆಕ್ ಕಂಪೆನಿಗೆ ಹೋಗುವ ರಸ್ತೆಯ ಬಳಿ ಬೈಕ್ ಸ್ಕಿಡ್ಡಾಗಿ ಬೈಕ್ ಸವಾರ ಸೇರಿದಂತೆ ಮಹಿಳೆ ಹಾಗೂ ಮಗು ಗಾಯಗೊಂಡ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ರವಿಚAದ್ರ ಎಂಬವರ ಬೈಕಿನಲ್ಲಿ ಹಿಂಬದಿ ಸವಾರಿಣಿಯಾಗಿ ಸುಕನ್ಯಾ(29) ಎಂಬವರು ತನ್ನ ನಾಲ್ಕು ವರ್ಷ ಪ್ರಾಯದ ಮಗು ಶೌರ್ಯ ಎಂಬಾತನ ಜತೆ ಪ್ರಯಾಣಿಸುತ್ತಿದ್ದಾಗ ರವಿಚಂದ್ರ ಅವರು ಅತೀವೇಗವಾಗಿ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ಅಪಘಾತದಿಂದ ಪುಟ್ಟ ಮಗು ಶೌರ್ಯ(4) ನಿಗೆ ತೀವೃ ಗಾಯಗಳಾಗಿದ್ದು, ಸುಕನ್ಯಾ ಹಾಗೂ ರವಿಚಂದ್ರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ






