Share this news

ಅಜೆಕಾರು:ಮರ್ಣೆ ಗ್ರಾಮದ ಕಾಡುಹೊಳೆ ಭಾಗ್ಯೋದಯ ರೈಸ್ ಮಿಲ್ಲಿನ ಮಾಲೀಕರಾಗಿದ್ದ ,ಉದ್ಯಮಿ ಪ್ರಗತಿಪರ ಕೃಷಿಕರಾದ ಬಾಲಕೃಷ್ಣ ನಾಯಕ್ (67) ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಕಾಡುಹೊಳೆಯ ತಮ್ಮ ನಿವಾಸದಲ್ಲಿ ಬೆಳಗ್ಗೆ 7.30 ಸುಮಾರಿಗೆ ಏಕಾಎಕಿ ಅಸ್ವಸ್ಥರಾದ ಅವರು ತೀವೃ ಹೃದಯಾಘಾತದಿಂದ ಕುಸಿದುಬಿದ್ದು ನಿಧನರಾಗಿದ್ದಾರೆ.
1994ರಲ್ಲಿ  ಕಾಡುಹೊಳೆಯಲ್ಲಿ ರೈಸ್ ಮಿಲ್ ಉದ್ಯಮ ಆರಂಭಿಸುವ ಮೂಲಕ ನೂರಾರು ಜನರಿಗೆ ಉದ್ಯೋಗ ಹಾಗೂ ಬದುಕು ಕಲ್ಪಿಸಿದ್ದಾರೆ. ಇದಲ್ಲದೇ ಕೊಡುಗೈ ದಾನಿಯಾಗಿ ಅಪಾರ ಜನಮೆಚ್ಚುಗೆ ಗಳಿಸಿದ್ದರು. ಪ್ರಸ್ತುತ ಪ್ರಗತಿಪರ ಕೃಷಿಕರಾಗಿದ್ದರು.
ಪರೋಪಕಾರಿ ಮನೋಭಾವದ ಸಾಧು ಸ್ವಭಾವದವರಾಗಿದ್ದ ಅವರು ಪತ್ನಿ, ಪುತ್ರಿ ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಗಣ್ಯರ ಸಂತಾಪ:
ಬಾಲಕೃಷ್ಣ ನಾಯಕ್ ಅವರ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ,ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ

 
 

 

 
 

Leave a Reply

Your email address will not be published. Required fields are marked *