ಕಾಪು : ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳ್ಳೆ ಗ್ರಾಮ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕ ಇವರ ಜಂಟಿ ಆಶ್ರಯದಲ್ಲಿ ಕಾಪು ತಾಲೂಕಿನ ಪಾಂಬೂರು ಕೊರಗರ ಬಲೆಪಿನಲ್ಲಿ “ಕೊರ್ರೆನ ಕೊರಲ್ ” – ಕೊರಗರ ನೆಲ ಮೂಲ ಪರಂಪರೆ, ಬಾಷೆಯ ಹೊಲಹು ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಪಾಂಗಾಳ ಕೂಡುಕುಟುಂಬದ ಗುರಿಕಾರ ಮಾನ್ಯ ವಸಂತ ಕೊಡ್ತಾರು ಕೊರಲ್ (ಕೊಳಲು )ನುಡಿಸುವ ಮೂಲಕ ಈ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮುಖ್ಯ ಅತಿಥಿಗಳಾಗಿದ್ದರು. ಕಾಪು ತಾಲೂಕು ಘಟಕ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುಂಡಲೀಕ ಮರಾಠೆ ಪ್ರಸ್ತಾವನೆಗೈದರು.
ಪಂಚಾಯತ್ ಪಿಡಿಓ ಸುಧಾಕರ ಶೆಟ್ಟಿ, ವಾರ್ಡ್ ಸದಸ್ಯೆ ಅಮಿತಾ ಉಪಸ್ಥಿತರಿದ್ದರು.
ಯುವ ಸಾಹಿತಿ ಅಶ್ವಿನ್ ಲಾರೆನ್ಸ್ ಸ್ವಾಗತಿಸಿ, ಕಾಪು ಶಾಲಾ ಶಿಕ್ಷಕ ನಿರೂಪಿಸಿದರು. ಪಾಂಗಾಳ ಬಾಬು ಕೊರಗರವರು, “ಕೊರಗರು ಈ ನೆಲದ ಮಕ್ಕಳು ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಆ ಬಳಿಕ ಕೊರ್ರೆನ ಪಾಟು (ಕೊರಗರ ಹಾಡು )-ರಮೇಶ್ ಮಂಚಕಲ್, ರಮೇಶ್ ಗುಂಡವು., ಸಾಂಪ್ರದಾಯಿಕ ಹಾಡು – ಕಮಲ, ಅಕ್ಕು, ಕುಡ್ದು ಕೊರಗ., ಕೊರ್ರೆನ ಕೊನ್ಕೆ -ಕಾಡಮಲ್ಲಿಗೆ ಕಲಾ ಪ್ರದರ್ಶನಗಳು ಜರುಗಿದವು.