Share this news

ಕಾರ್ಕಳ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಎಲ್ಲಾ ರಾಜಕೀಯ ಪಕ್ಷ÷ಗಳು ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಈಗಾಗಲೇ ಕಸರತ್ತು ಆರಂಭಿಸಿದ್ದು, ಈ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಮೊದಲ ಪಟ್ಟಿ ಪ್ರಕಟಿಸಿದ್ದು, ಇತ್ತ ಬಿಜೆಪಿ ಕೂಡ ಪಟ್ಟಿ ಫೈನಲ್ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.


ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರವು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು,ಬಿಜೆಪಿ ,ಕಾಂಗ್ರೆಸ್ ಹಾಗೂ ಪಕ್ಷೇತರರಾಗಿ ಪ್ರಮೋದ್ ಮುತಾಲಿಕ್ ಸ್ಪರ್ಧೆ ಖಚಿತವಾಗಿದ್ದು ಬಹುತೇಕ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಈ ಬಾರಿ ಕಾರ್ಕಳದಲ್ಲಿ ಜೆಡಿಎಸ್ ಜತೆ ಆಮ್ ಆದ್ಮಿ ಪಕ್ಷವು ಕೂಡ ಅದೃಷ್ಟ ಪರೀಕ್ಷೆಗೆ ಇಳಿಯುವ ಸಾಧ್ಯತೆಯಿದೆ.

ಬಿಜೆಪಿ ಪಕ್ಷದ ಉನ್ನತ ಮೂಲಗಳ ಪ್ರಕಾರ ಕಾರ್ಕಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಹಾಗೂ ಸಚಿವ ಸುನಿಲ್ ಕುಮಾರ್ ಸ್ಪರ್ಧೆ ಖಚಿತವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ಈಗಾಗಲೇ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅಭ್ಯರ್ಥಿ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.ಪಕ್ಷದ ಟಿಕೆಟ್‌ಗಾಗಿ ಮಂಜುನಾಥ ಪೂಜಾರಿ,ನೀರೆ ಕೃಷ್ಣ ಶೆಟ್ಟಿ,ಡಿ.ಆರ್ ರಾಜು ಹಾಗೂ ಸುರೇಂದ್ರ ಶೆಟ್ಟಿ ಅರ್ಜಿ ಸಲ್ಲಿಸಿದ್ದ ಬಳಿಕ ದಿಢೀರ್ ಆಗಿ ಉದಯಕುಮಾರ್ ಶೆಟ್ಟಿ ಹೆಸರು ಸ್ಕಿçÃನಿಂಗ್ ಕಮಿಟಿಯ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಈ ಎಲ್ಲಾ ಬೆಳವಣಿಗೆಯ ನಡುವೆ ಕಾರ್ಕಳದಿಂದ ಕೈ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಕಾಂಗ್ರೆಸ್ ಈಗಾಗಲೇ ಕಾರ್ಕಳಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಭಿನ್ನಮತದ ಬೇಗುದಿಯಿಂದ ಪಾರಾಗಲು ಅಭ್ಯರ್ಥಿ ಘೋಷಣೆ ತಡೆಹಿಡಿದಿದೆ ಎನ್ನಲಾಗುತ್ತಿದೆ.


ಒಟ್ಟಿನಲ್ಲಿ ಚುನಾವಣಾ ಕಣ ದಿನೇದಿನೇ ಕಾವು ಪಡೆದುಕೊಂಡಿದ್ದು ಅಭ್ಯರ್ಥಿಗಳ ಘೋಷಣೆಯ ಬಳಿಕ ಪ್ರಚಾರಕಣ ಇನ್ನಷ್ಟು ರಂಗೇರಲಿದೆ.

Leave a Reply

Your email address will not be published. Required fields are marked *