Share this news

ಕಾರ್ಕಳ: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷ ರಾಮ ದೇವರ ಪ್ರಾಣ ಪ್ರತಿಷ್ಠೆಗೆ ಇನ್ನು ಕೇವಲ ಎರಡೇ ದಿನಗಳು ಬಾಕಿ ಉಳಿದಿದ್ದು ಈ ಒಂದು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತರರಾಗಿದ್ದಾರೆ. ದೇಶದಾದ್ಯಂತ ರಾಮ ನಾಮ ಸಂಕೀರ್ತನೆ, ರಾಮ ಭಜನೆ ಜೋರಾಗಿದೆ.
ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರದ ಲೋಕಾರ್ಪಣೆಯ ಸಡಗರದ ನಡುವೆ ಕಾರ್ಕಳದಲ್ಲಿಯೂ ರಾಮ ಮಂದಿರದ ಸಡಗರ ಕಳೆಗಟ್ಟಿದೆ. ಕಾರ್ಕಳ ಪೇಟೆ, ಜೋಡುರಸ್ತೆ, ಹೆಬ್ರಿ, ಅಜೆಕಾರು, ಬೈಲೂರು, ಬೆಳ್ಮಣ್,ಬಜಗೋಳಿ ಮುಂತಾದ ಕಡೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಸರ್ಕಲ್ ಗಳಲ್ಲಿ ರಾಮ ಹಾಗೂ ರಾಮ ಮಂದಿರದ ಚಿತ್ರವಿರುವ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಇದಲ್ಲದೇ ಕಾರು, ಬಸ್ ,ಲಾರಿ, ಬೈಕ್ ಸೇರಿದಂತೆ ಎಲ್ಲಾ ವಾಹನಗಳಲ್ಲಿ ರಾಮ ಧ್ವಜ ಹಾರಾಡುತ್ತಿದೆ ಮನೆಮನೆಗಳಲ್ಲಿ ರಾಮನ ಧ್ವಜಗಳನ್ನು ಹಾಕುವ ಮೂಲಕ ರಾಮ ಸ್ಮರಣೆ ಜೋರಾಗಿ ನಡೆಯುತ್ತಿದೆ.
ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ದಿನವಾದ ಸೋಮವಾರದಂದು ಕಾರ್ಕಳ ತಾಲೂಕಿನ ಹಲವೆಡೆ ಉಚಿತ ಉಪಹಾರ, ಮಜ್ಜಿಗೆ ಹಾಗೂ ಪಾನಕ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ರಾಮ ದೇವರ ಪ್ರಾಣ ಪ್ರತಿಷ್ಠೆಯ ನೇರಪ್ರಸಾರವನ್ನು ವೀಕ್ಷಿಸಲು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ
ಒಟ್ಟಿನಲ್ಲಿ ರಾಮ ಮಂದಿರದ ಲೋಕಾರ್ಪಣೆ ದಿನದಂದು ದೇಶಕ್ಕೆ ದೇಶವೇ ಸಂಭ್ರದಿAದ ಸಡಗರದಿಂದ ಕುಣಿದಾಡುತ್ತಿದ್ದು ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *