Share this news

ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಪಟ್ಲ ದಾನಿಯಾ ಪಿರೇರಾ ಎಂಬವಬರ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ನಿರೀಕ್ಷಕ ಟಿ.ಡಿ ನಾಗರಾಜ್ ನೇತೃತ್ವದ ಪೊಲೀಸರ ತಂಡ ದಾಳಿ ಗುರುವಾರ ದಾಳಿ ನಡೆಸಿ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.
ಹಣಗಳಿಸುವ ಉದ್ದೇಶದಿಂದ ಮಹಿಳೆಯರನ್ನು ಹಾಗೂ ಯುವತಿಯರನ್ನು ಬಳಸಿಕೊಂಡು ಅನೈತಿಕ ದಂಧೆ ವ್ಯವಹಾರ ನಡೆಸುತ್ತಿದ್ದ ಕಾರ್ಕಳದ ಗೋವರ್ಧನ, ಎಣ್ಣೆಹೊಳೆ ಶಿವಕೃಪಾ ನಿವಾಸಿ ಉಪೇಂದ್ರ ಯಾನೆ ಅವಿನಾಶ್ ನಾಯ್ಕ್, ಉಡುಪಿ ತಾಲೂಕಿನ ದೀಪಾ, ಅಶೋಕ್ ಕಾರ್ಕಳ ಹಾಗೂ ಕುಕ್ಕುಂದೂರು ಗ್ರಾಮದ ನಕ್ರೆ ಕಿನ್ನರಕಟ್ಟೆ ಪ್ರವೀಣ್ ಪೂಜಾರಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ದಂಧೆಗೆ ಬಳಸಿಕೊಂಡಿದ್ದ ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *