ಕಾರ್ಕಳ :ಕಾರ್ಕಳದ ಶ್ರೀ ವೀರಮಾರುತಿ ದೇವಸ್ಥಾನದ ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ ಜಾಗೃತಿ ಸಭೆಯು ಮಾ.19ರಂದು ಜರುಗಿತು.
ಶಂಖನಾದ, ದೀಪ ಪ್ರಜ್ವಲನೆ ಹಾಗೂ ವೇದ ಮಂತ್ರ ಘೋಷದೊಂದಿಗೆ ಕಾರ್ಯಕ್ರಮ ಶುಭಾರಂಭಗೊAಡಿತು.

ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಹಿಂದೂಗಳು, ಹಿಂದೂ ಸಂಘಟನೆಗಳು ಮತ್ತು ವಿವಿಧ ಪಂಗಡಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ, ಹಿಂದೂ ಜನ ಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ 2025 ಕ್ಕೂ ಅಧಿಕ ಸಭೆಯನ್ನು ಭಾರತದಾದ್ಯಂತ ನಡೆಸಿಕೊಂಡು ಬಂದಿದೆ.

ಸಭೆಯಲ್ಲಿ ನಂದಕುಮಾರ್ ಹೆಗ್ಡೆ ಅಜೆಕಾರು , ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕರಾದ ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
