Share this news

ಉಡುಪಿ: ಕನ್ನಡ ಮತ್ತು ಸಂಸಕೃತಿ ಇಲಾಖೆ ಉಡುಪಿ ಜಿಲ್ಲೆ ಇನ್ವೆಂಜರ್ ಪೌಂಡೇಶನ್ ಮಂಗಳೂರು, ಸೃಷ್ಠಿಫೌಂಡೇಶನ್ ಮಂಗಳೂರು, ಸೃಷ್ಠಿ ಫೌಂಡೇಶನ್ (ರಿ) ಕಟಪಾಡಿ ಮತ್ತು ಪ್ರಥಮ್ ಮ್ಯಾಜಿಕ್ ವಲ್ಡ್ ಕಟಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಕನಾಟಕ ಸುವರ್ಣ ಮಹೋತ್ಸವದ ಅಂಗವಾಗಿ 2023 ನೇ ಸಾಲಿನ ಹಾಗೂ ಮೊದಲನೇ ರಾಜ್ಯ ಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಬಹುಮುಖ
ಪ್ರತಿಭೆ ವಿಭಾಗದಲ್ಲಿ ಕಾರ್ಕಳದ ಅನ್ವಿ ಹೆಚ್ ಅಂಚನ್ ಗೆ ಪ್ರಶಸ್ತಿ ಲಭಿಸಿದ್ದು, ಉಡುಪಿಯ ಕಟಪಾಡಿ ಎಸ್,ವಿ,ಎಸ್ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಅನ್ವಿ ಹೆಚ್ ಅಂಚನ್ ಜ್ಞಾನಸುಧಾ ಆಂಗ್ಲಾ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಯೋಗಾಸನ ಸ್ಪರ್ದೆಯಲ್ಲಿ ರಾಷ್ಟç & ಅಂತರಾಷ್ಟಿçÃಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದಿರುವುದಲ್ಲದೇ, ಕರಾಟೆ, (ಟೋಕ್ವಾಂಡೋ) ಒಲಿಂಪಿಯಾಡ್, ನೃತ್ಯ ಸೇರಿದಂತೆ ಸ್ಯಾಕ್ಸೋಫೋನ್, ಕೊಳಲುವಾದನ, ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿರುತ್ತಾರೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರ ಆಪ್ತ ಸಹಾಯಕ ಹರೀಶ್ ಅಂಚನ್ ಹಾಗೂ ಶೋಭಾ ದಂಪತಿಗಳ ಸುಪುತ್ರಿಯಾಗಿರುವ ಅನ್ವಿ ಅಂಚನ್ ಯೋಗಾಸನ ತರಬೇತುದಾರ ನರೇಂದ್ರ ಕಾಮತ್ ಹಾಗೂ ಕಾರ್ಕಳದ ಸುದರ್ಶನ್ ರವರ ಮಾರ್ಗದರ್ಶನದಲ್ಲಿ ಯೋಗ ತರಬೇತಿ ಪಡೆದಿದ್ದು, ಸ್ಯಾಕ್ಸೋಫೋನ್ ವಾದನವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಕಾಶ್ ದೇವಾಡಿಗರವರಲ್ಲಿ ಅಭ್ಯಾಸ ಮಾಡುತ್ತಿದ್ದು ಕೊಳಲುವಾದನ ತರಭೇತಿಯನ್ನು ಚಿತ್ತಾರ ಕಲಾ ತರಬೇತಿ ಕೇಂದ್ರದಲ್ಲಿ ಪಡೆದಿದ್ದಾರೆ

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *