ಕಾರ್ಕಳ : ಕಮರ್ಷಿಯಲ್ ಹಬ್ ಎನಿಸಿಕೊಂಡಿರುವ ಜೋಡುರಸ್ತೆಯಲ್ಲಿ ಜನರ ದೈನಂದಿನ ಬಳಕೆಯ ವಸ್ತುಗಳಿಂದ ಹಿಡಿದು ಎಲ್ಲಾ ವಿಧದ ಗೃಹೋಪಯೋಗಿ ಉಪಕರಣಗಳು ಗುಣಮಟ್ಟ ಹಾಗೂ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ನಿಮ್ಮ ಆಯ್ಕೆಯ ಬ್ರಾಂಡ್ ಗಳಲ್ಲಿ ಸಿಗಲಿದೆ.
ಇದೇ ನವೆಂಬರ್5 ರಂದು ಎ1 ಸೂಪರ್ ಮಾರ್ಟ್
ಜೋಡುರಸ್ತೆಯ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಳ್ಳಲಿದೆ.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ನ 5 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನೂತನ ಉದ್ಯಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತುಳು ಮತ್ತು ಕನ್ನಡ ಚಲನಚಿತ್ರ ನಟ ಅರ್ಜುನ್ ಡಿ. ಕಾಪಿಕಾಡ್, ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಉಷಾ ಕೆ., ಉದ್ಯಮಿಗಳಾದ ನವೀನ್ ಚಂದ್ರ ಶೆಟ್ಟಿ ಮುಂಬೈ, ಮುನಿಯಾಲು ಗಣೇಶ್ ನಾಯಕ್ ಹಾಗೂ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಕಾರ್ಕಳ ಶಾಖೆಯ ಮುಖ್ಯ ಪ್ರಬಂಧಕ ಸುಧೀರ್ ಕಾಮತ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.