Share this news

ಕಾರ್ಕಳ: ದೇಶದೆಲ್ಲೆಡೆ ಆಗಸ್ಟ್ 15ರಂದು ಶಾಲೆಯ ಪುಟಾಣಿಗಳು ಮುಂಜಾನೆಯಿAದಲೇ ಸ್ವಾಂತ್ರೊö್ಯÃತ್ಸವದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರೆ, ಇಲ್ಲೊಂದು ಶಾಲೆಯಲ್ಲಿ ಬಾರ್ ಬೇಡ ಶಿಕ್ಷಣ ಬೇಕು, ಮಕ್ಕಳಿಗೆ ಶಿಕ್ಷಣ ಬೇಕು ಬಾರುಮನೆ ಬೇಡ ಎಂಬಿತ್ಯಾದಿ ಬರಹಗಳ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಧಿಕ್ಕಾರದ ಘೋಷಣೆ ಕೂಗಿ ಪುಟಾಣಿ ಮಕ್ಕಳು ಸ್ವಾತಂತ್ರö್ಯ ಆಚರಣೆಯ ದಿನವೇ ಧರಣಿಗೆ ಕುಳಿತ ಪ್ರಸಂಗ ನಡೆದಿದೆ.

ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಬಜಗೋಳಿ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ಮಕ್ಕಳು ಸ್ವಾತಂತ್ರö್ಯದ ಸಂಭ್ರಮಾಚರಣೆ ಬಿಟ್ಟು ನೂರಾರು ಪುಟಾಣಿ ಮಕ್ಕಳು ಶಾಲೆಯ ಆವರಣದ ಪಕ್ಕದಲ್ಲೇ ಮದ್ಯ ಮಾರಾಟದ ಬಾರ್ ತೆರೆಯುವುದಕ್ಕೆ ಆಕ್ಷೇಪಿಸಿ ಪ್ರತಿಭಟನೆ ಕುಳಿತಿದ್ದು ಮಕ್ಕಳ ಹೋರಾಟಕ್ಕೆ ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಣಪ್ರೇಮಿಗಳು ಕೈಜೋಡಿಸಿದ್ದಾರೆ.

ಏನಿದು ಪ್ರಕರಣ:
ಬಜಗೋಳಿಯ ತುಡರ್ ವಾಣಿಜ್ಯ ಸಂಕೀರ್ಣದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಹರೀಶ್ ಸಾಲ್ಯಾನ್ ಎಂಬವರು ಲಾಡ್ಜಿಂಗ್ ಹಾಗೂ ಬಾರ್ ತೆರೆಯಲು ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿ ಬಾರ್ ತೆರೆಯುವ ವಿಚಾರದಲ್ಲಿ ಶಾಲಾಭಿವೃದ್ಧಿ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದ್ದು ಈ ಕುರಿತು ಶಿಕ್ಷಣ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿತ್ತು.ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಕನಿಷ್ಠ 100 ಮೀಟರ್ ಅಂತರದೊಳಗೆ ಯಾವುದೇ ಮದ್ಯ ಅಥವಾ ಮಾದಕ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡುವಂತಿಲ್ಲ. ಆದರೆ ಪ್ರಸ್ತುತ ತೆರೆಯಲು ಉದ್ದೇಶಿಸಲಾದ ಬಾರ್ ಶಾಲೆಯಿಂದ 100 ಮೀಟರ್ ಅಂತರದ ಒಳಗಿದೆ ಎಂದು ಆರೋಪಿಸಲಾಗಿದೆ. ಈಗಾಗಲೇ ಬಾರ್ ತೆರೆಯಲು ಸ್ಥಳೀಯ ನಲ್ಲೂರು ಗ್ರಾಮ ಪಂಚಾಯಿತಿ ಆಡಳಿತ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ಅಭಿಪ್ರಾಯ ಪಡೆಯದೇ ಏಕಾಎಕಿ ನಿರಾಕ್ಷೇಪಣಾ ಪತ್ರ ನೀಡಿದ್ದು ಮಾತ್ರವಲ್ಲದೇ ಉದ್ಯಮ ಪರವಾನಿಗೆಯನ್ನೂ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶಾಲೆಯ ಪಕ್ಕದಲ್ಲೇ ಪಂಚಾಯತ್ ಆಡಳಿತ ನಿರಾಕ್ಷೇಪಣಾ ಪತ್ರ ಹಾಗೂ ಉದ್ದಿಮೆ ಪರವಾನಿಗೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.

ಬಾರ್ ತೆರೆಯದಂತೆ ಎಸ್‌ಡಿಎಂಸಿ ಸಲ್ಲಿಸಿದ್ದ ಮನವಿಯ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಡಿಡಿಪಿಐ ಮೂಲಕ ಈ ಕುರಿತು ಮಾಹಿತಿ ಕೋರಿ ಅಬಕಾರಿ ಇಲಾಖೆಗೆ ಪತ್ರ ಬರೆದಿದ್ದರೂ ಈವರೆಗೂ ಅಬಕಾರಿ ಇಲಾಖೆಯಿಂದ ಉತ್ತರ ಬಂದಿಲ್ಲವೆAದು ಶಿಕ್ಷಣಧಿಕಾರಿ ಭಾಸ್ಕರ್ ಟಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ವ್ಯತಿರಿಕ್ತ ಹೇಳಿಕೆ ನೀಡಿದ್ದು, ಈಗಾಗಲೇ ಬಾರ್ ಹಾಗೂ ಶಾಲೆಯ ನಡುವಿನ ಅಂತರವನ್ನು ಅಳತೆ ಮಾಡಿದ್ದು ಶಾಲೆಯ ಆವರಣದಿಂದ 104 ಮೀಟರ್ ದೂರದಲ್ಲಿ ಇರುವ ಕಾರಣದಿಂದ ಪಂಚಾಯತ್ ನಿರಾಕ್ಷೇಪಣಾ ಪತ್ರ ಹಾಗೂ ಉದ್ದಿಮೆ ಪರವಾನಿಗೆ ಸೇರಿದಂತೆ ಇತರೇ ದಾಖಲೆಗಳ ಆಧಾರದಲ್ಲಿ ಬಾರ್ ತೆರೆಯಲು ಅಬಕಾರಿ ಇಲಾಖೆಯ ಆಕ್ಷೇಪಣೆ ಇಲ್ಲವೆಂದು ವರದಿ ನೀಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಬಕಾರಿ ಇಲಾಖೆಯ ವರದಿ ಆಧರಿಸಿ ಮುಂದಿನ ಕ್ರಮ: ಭಾಸ್ಕರ್ ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶಾಲೆಯ ಆವರಣದಿಂದ 100 ಮೀಟರ್ ಒಳಗೆ ಬಾರ್ ತೆರೆಯಲು ಅವಕಾಶವಿಲ್ಲ ಎಂಬ ನಿಯಮಾವಳಿಯಿದೆ. ಮೇಲ್ನೋಟಕ್ಕೆ ಈ ಬಾರ್ 100 ಮೀಟರ್ ಅಂತರದೊಳಗೆ ಬರುವುದರಿಂದ ಸ್ಥಳೀಯಾಡಳಿತ ನಿರಾಕ್ಷೇಪಣಾ ಪತ್ರ ನೀಡಲು ಸಾಧ್ಯವಿಲ್ಲ ಅಲ್ಲದೇ ಈ ಕುರಿತು ಡಿಡಿಪಿಐಯವರು ಅಬಕಾರಿ ಇಲಾಖೆಯ ಬಳಿ ವರದಿ ಕೋರಿ ಪತ್ರ ಬರೆದಿದ್ದು ಈವರೆಗೂ ಉತ್ತರ ಬಂದಿಲ್ಲ, ವರದಿ ಬಂದ ಬಳಿಕ ಈ ಕುರಿತು ಪರಿಶೀಲಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯಾಡಳಿತದ ನಿರಾಕ್ಷೇಪಣಾ ಪತ್ರ ಹಾಗೂ ಉದ್ದಿಮೆ ಪರವಾನಿಗೆ ಆಧರಿಸಿ ವರದಿ ನೀಡಲಾಗಿದೆ: ಸುಷ್ಮಾ, ಅಬಕಾರಿ ನಿರೀಕ್ಷಕರು ಕಾರ್ಕಳ

ಬಜಗೋಳಿಯ ಪ್ರಾಥಮಿಕ ಶಾಲೆಯ ಬಳಿ ತೆರೆಯಲು ಉದ್ದೇಶಿಸಲಾಗಿರುವ ಬಾರ್ ಕುರಿತಂತೆ ನಲ್ಲೂರು ಪಂಚಾಯಿತಿ ಆಡಳಿತ ನೀಡಿರುವ ನಿರಾಕ್ಷೇಪಣಾ ಪತ್ರ ಹಾಗೂ ಉದ್ದಿಮೆ ಪರವಾನಿಗೆ ಆಧಾರದಲ್ಲಿ ಅಬಕಾರಿ ಇಲಾಖೆಯ ವರದಿ ನೀಡಲಾಗಿದೆ. ಇದಲ್ಲದೇ ಶಾಲಾ ಆವರಣದಿಂದ ಬಾರ್ ಕೌಂಟರಿಗೆ 104 ಮೀಟರ್ ದೂರವಿರುವ ಹಿನ್ನಲೆಯಲ್ಲಿ ನಿಯಮಾನುಸಾರ ಅಬಕಾರಿ ಇಲಾಖೆ ಆಕ್ಷೇಪಣೆ ಸಲ್ಲಿಸುವಂತಿಲ್ಲ, ಈ ಕುರಿತು ಲಿಖಿತ ಆಕ್ಷೇಪಣೆಗಳು ಬಂದರೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಕಾರ್ಕಳ ಅಬಕಾರಿ ಇಲಾಖೆಯ ನಿರೀಕ್ಷಕಿ ಸುಷ್ಮಾ ಹೇಳಿದ್ದಾರೆ.

ಈಗಾಗಲೇ ಬಾರ್ ತೆರೆಯಲು ಎಲ್ಲಾ ಅನುಮತಿ ಪಡೆಯಲಾಗಿದೆ ಎನ್ನುವ ಮಾಹಿತಿಯಿದ್ದು, ಮಕ್ಕಳ ಭವಿಷ್ಯದ ಹಿತದಷ್ಟಿಯಿಂದ ಬಾರ್ ಪರವಾನಿಗೆ ಕುರಿತು ಜಿಲ್ಲಾಡಳಿತ ಪರಾಮರ್ಶೆ ನಡೆಸಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *