ಕಾರ್ಕಳ: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಳದ ವತಿಯಿಂದ ನಡೆಸಲಾಗುತ್ತಿರುವ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಸ್ಥಾಪನೆಯಾಗಿ 50 ಸಂವತ್ಸರಗಳು ತುಂಬಿರುವ ಹಿನ್ನಲೆಯಲ್ಲಿ ಎಸ್.ವಿ ಸಮೂಹ ಶಿಕ್ಷಣ ಸಂಸ್ಥೆಯು ನವೆಂಬರ್ 26ರಿಂದ ಡಿಸೆಂಬರ್ 1ರವರೆಗೆ ಸುವರ್ಣ ಮಹೋತ್ಸವ ಆಚರಿಸಲಿದೆ ಎಂದು ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ ಪಿ ಶೆಣೈ ತಿಳಿಸಿದರು
ಅವರು ಬುಧವಾರ ಎಸ್.ವಿ ಪದವಿ ಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸ್ತ್ರೀ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ 1911 ರಲ್ಲಿ ದೇವಳದ ಆಡಳಿತ ಮಂಡಳಿವರು ಹಿಂದೂ ಬಾಲಿಕಾ ಪಾಠ ಶಾಲೆಯನ್ನು ಪ್ರಾರಂಭಿಸಿದರು. ಹಿರಿಯರ ದೂರದರ್ಶಿತ್ವ, ವಿದ್ಯಾಭಿಮಾನಿಗಳ ಉದಾರ ಕೊಡುಗೆ, ಸಮಸ್ತ ಅಧ್ಯಾಪಕ, ಅಧ್ಯಾಪಕೇತರರ ಸಾರ್ಥಕ ನಿಷ್ಠಾಪೂರ್ಣ ಸೇವೆ. ಎಲ್ಲಾ ವಿದ್ಯಾರ್ಥಿಗಳ ಉತ್ತಮ ಶಿಸ್ತು, ಕಲಿಕೆ ಇವುಗಳಿಂದ ಈ ವಿದ್ಯಾಸಂಸ್ಥೆಯು 2011ರಲ್ಲಿ ಶತಸಂಭ್ರಮವನ್ನು ಆಚರಿಸುವ ಮೂಲಕ ಸ್ತ್ರೀ ಶಿಕ್ಷಣ ವಿದ್ಯಾಕ್ಷೇತ್ರದಲ್ಲಿಯೇ ಒಂದು ಅಪೂರ್ವ ಸಾಧನೆಯಾಗಿದೆ.
ಎಸ್.ವಿ ಸಮೂಹ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, 1944 ರಲ್ಲಿ ಕನ್ನಡ ಮಾಧ್ಯಮ ಎಸ್.ವಿ.ಟಿ. ಬಾಲಿಕಾ ಪ್ರೌಢಶಾಲೆ, 1970 ರಲ್ಲಿ ಒಂದು ವರ್ಷದ ಬಾಲಿಕಾ ಪದವಿ ಪೂರ್ವ ವಿಭಾಗ, 1972 ರಲ್ಲಿ ಎರಡು ವರ್ಷದ ಸಂಯುಕ್ತ ಪದವಿ ಪೂರ್ವ ವಿಭಾಗವಾಗಿ ಪದೋನ್ನತಿ ಹೊಂದಿತು. 1988 ರಲ್ಲಿ ಎಸ್.ವಿ. ಮಹಿಳಾ ಪದವಿ ಕಾಲೇಜು ಪ್ರಾರಂಭಗೊAಡಿತು. ಹಾಗೆಯೇ ಸಂಸ್ಥೆಯಲ್ಲಿ 2015 ರಲ್ಲಿ ನರ್ಸರಿ ಹಂತದಿAದ 10 ನೇ ತರಗತಿಯವರೆಗೆ ರಾಜ್ಯ ಪರಿಪಠ್ಯ ಕ್ರಮದಂತೆ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭವಾಯಿತು. ಶ್ರೀ ದೇವಳದ ಸಂಪೂರ್ಣ ಸಹಕಾರ ಹಾಗೂ ಶ್ರೀ ವೆಂಕಟರಮಣ ಎಜ್ಯುಕೇಶನ್ ಟ್ರಸ್ಟ್ ಸಹಭಾಗಿತ್ವದಲ್ಲಿ ಸಂಸ್ಥೆ ಸುಸಜ್ಜಿತ ಕಟ್ಟಡದ ಜೊತೆಗೆ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿಕೊAಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಶಿಕ್ಷಣ ಸಂಸ್ಥೆಯ ಎಲ್ಲಾ ವಿಭಾಗಗಳಲ್ಲಿ ನುರಿತ ಬೋಧಕ ಬೋಧಕೇತರ ವೃಂದದವರಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಯಲ್ಲಿ ಕೈಜೋಡಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಸುಸಜ್ಜಿತ ಕ್ರೀಡಾಂಗಣ, ವಿಶಾಲವಾದ ಸಭಾಂಗಣ, ಅತ್ಯುತ್ತಮ ಅಕ್ಷರದಾಸೋಹ ವ್ಯವಸ್ಥೆ, ಭೋಜನ ಶಾಲೆ ಇದ್ದು, ವಿದ್ಯಾರ್ಥಿಗಳಿಗೆ ಶುಚಿ ರುಚಿಯಾದ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಅಪೂರ್ವ ಸಾಧನೆಗಳನ್ನು ಮಾಡಿ ಸಂಸ್ಥೆಯ ಉನ್ನತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕ್ರೀಡಾಕ್ಷೇತ್ರದಲ್ಲಿ ನಮ್ಮ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆಗೈದು ಸಂಸ್ಥೆಯ ಕೀರ್ತಿ ಶಿಖರವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ಪ್ರಸಕ್ತ ವರ್ಷ ಸಂಸ್ಥೆಯಲ್ಲಿ ನೂತನವಾಗಿ ಕಾರ್ಕಳ ಮೀರಾ ಕಾಮತ್ ಮೆಮೋರಿಯಲ್ ಗಣಕಯಂತ್ರ ಪ್ರಯೋಗಾಲಯ ಸಿದ್ದಗೊಂಡಿದ್ದು,ಮುAದಿನ ಶೈಕ್ಷಣಿಕ ವರ್ಷ(2024-25)ವಾಣಿಜ್ಯ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದೊಂದಿಗೆ ನೂತನ ಸಂಯೋಜನೆ ಪ್ರಾರಂಭವಾಗಲಿದೆ ಎಂದು ಕೆ.ಪಿ ಶೆಣೈ ಮಾಹಿತಿ ನೀಡಿದರು.
ವಿಶೇಷವಾಗಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿರುವ ನಮ್ಮ ಸಂಸ್ಥೆ ಇಲ್ಲಿನ ಪ್ರಶಾಂತ ವಾತಾವರಣ, ಸಮರ್ಥ ಅಧ್ಯಾಪನ, ಉತ್ಕೃಷ್ಟ ಫಲಿತಾಂಶ ಮಿಗಿಲಾಗಿ ಶ್ರೀ ದೇವಳದ ವಿಶೇಷ ಸಹಕಾರದಿಂದ ಜನಪ್ರಿಯವಾಗಿದೆ. ಎಸ್.ವಿ.ಟಿ ಎಂಬ ಹೆಮ್ಮರವಾದ ವಿದ್ಯಾಸಂಸ್ಥೆಯ ಒಂದು ಶಾಖೆಯಾಗಿರುವ ಎಸ್.ವಿ.ಟಿ. ವನಿತಾ ಪದವಿ ಪೂರ್ವ ವಿಭಾಗಕ್ಕೆ ಸುವರ್ಣ ಸಂಭ್ರಮ, 50 ಸಾರ್ಥಕ ವಸಂತಗಳನ್ನು ಪೂರ್ಣಗೊಳಿಸಿರುವ ಪದವಿ ಪೂರ್ವ ವಿಭಾಗದ ಸಾಧನೆಯನ್ನು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸಲು ಆಡಳಿತ ಮಂಡಳಿಯು ನಿರ್ಧರಿಸಿದ್ದು ನವೆಂಬರ್ 26 ರಿಂದ ಡಿಸೆಂಬರ್ 01 ರ ವರೆಗೆ ಸುವರ್ಣ ಸಂಭ್ರಮ ಆಚರಣೆಯನ್ನು ಹಮ್ಮಿಕೊಂಡಿದೆ ಈ ಸುವರ್ಣ ಸಂಭ್ರಮಾಚರಣೆಯಲ್ಲಿ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳೂ, ಸಂಸ್ಥೆಯ ಹಿತೈಷಿಗಳೂ ತಮ್ಮ ಸಹಕಾರದ ಜೊತೆಗೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಕೈಜೋಡಿಸುವಂತೆ ಕೆ.ಪಿ ಶೆಣೈ ಕರೆ ನೀಡಿದರು
ಸುದ್ದಿಗೋಷ್ಟಿಯಲ್ಲಿ ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು,ಕನ್ನಡ ಉಪನ್ಯಾಸಕ ದೇವದಾಸ್ ಉಪಸ್ಥಿರಿದ್ದರು