Share this news

ಕಾರ್ಕಳ: ಶೇಖರ್ ಅಜೆಕಾರು ಅವರು ಸಾಹಿತ್ಯದ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಉಳಿಸುವ ಕಾರ್ಯವನ್ನು  ಮಾಡಿದ್ದಾರೆ ಮಾಡಿದ್ದಾರೆ.ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ  ನಷ್ಟ ವಾಗಿದೆ
ಎಂದು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಅವರು ಜ.07 ರಂದು ಕಾರ್ಕಳ ಪ್ರಕಾಶ್ ಹೋಟೆಲ್ ಸಭಾಂಗಣದಲ್ಲಿ ನಡೆದ
ಪತ್ರಕರ್ತ ಡಾ. ಶೇಖರ ಅಜೆಕಾರು ನೆನಪು ಕಾರ್ಯಕ್ರಮದಲ್ಲಿ   ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ  ಕ್ಷೇತ್ರದಲ್ಲಿ  ಮಕ್ಕಳು,  ಯುವಕರಿಗೆ ಸಾಹಿತ್ಯ ಪಾಠವನ್ನು  ನೀಡುವ ವಿಶಾಲ ಮನೋಭಾವ ಅವರಲ್ಲಿತ್ತು ಸಾಹಿತ್ಯ‌ಲೋಕವೇ ಅವರ ಉಸಿರಾಗಿತ್ತು  ಎಂದರು.

ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ (ರಿ.) ರಾಜ್ಯಾಧ್ಯಕ್ಷ. ರವೀಂದ್ರ ಶೆಟ್ಟಿ, ಬಜಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲಕಾಲಕ್ಕೆ ಸಮಾಜಕ್ಕೆ ವರದಿ ಮಾಡುವುದರ ಜೊತೆಗೆ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದರು

  ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್  ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ  ಸಮಾಜದ ಓರೆಕೋರೆಯನ್ನು ತಿದ್ದುವ ಕೆಲಸ   ಪತ್ರಕರ್ತರಿಂದ ಸಾಧ್ಯವಾಗಿದೆ. ಪತ್ರಕರ್ತ ಶೇಖರ್ ಅಜೆಕಾರು ಅವರ ಸಾಹಿತ್ಯ  ಪ್ರೇಮ ಎಲ್ಲರಿಗೂ ಪ್ರೇರಣೆ ಯಾಗಲಿ ಎಂದರು

ನ್ಯಾಯವಾದಿ ಎಂ ಕೆ ವಿಜಯಕುಮಾರ್ ಮಾತನಾಡಿ ಸರಕಾರವು ಪತ್ರಕರ್ತರ ನಿಧಿ ಸ್ಥಾಪಿಸಿ  ಅವರ ಕುಟುಂಬಕ್ಕೆ  ನೆರವಾಗಬೇಕು ಎಂದರು.
ಈ‌ ಸಂದರ್ಭದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪತ್ರಕರ್ತ ವಸಂತ ಕುಮಾರ್ ಉಪಸ್ಥಿತರಿದ್ದರು. ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿದರು.  ಸುರೇಶ್ ಬಜಗೋಳಿ  ಕಾರ್ಯಕ್ರಮ ನಿರೂಪಿಸಿದರು.ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ವಂದಿಸಿದರು

Leave a Reply

Your email address will not be published. Required fields are marked *