ಕಾರ್ಕಳ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಸಘಟನಾ ಕಾರ್ಯಾಲಯ ಪಾಂಚಜನ್ಯ ಇದರ ಉದ್ಘಾಟನೆಯು ಫೆ 9ರಂದು ಗುರುವಾರ ನಡೆಯಲಿದೆ. ಕಾರ್ಕಳದ ಪರಪು ಎಂಬಲ್ಲಿನ ಕಚೇರಿಯ ಉದ್ಘಾಟನೆ ಪ್ರಯುಕ್ತ ಬೆಳಗ್ಗೆ 11ರಿಂದ ಗಣಹೋಮ,ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮುತಾಲಿಕ್ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಪ್ರಮೋದ್ ಮುತಾಲಿಕ್ ಅವರು ಸಂಘಟನಾ ಕಾರ್ಯಾಲಯ ತೆರೆಯುವ ಮೂಲಕ ಚುನಾವಣಾ ಅಖಾಡಕ್ಕೆ ಇನ್ನಷ್ಟು ರಂಗು ತುಂಬಿದ್ದಾರೆ. ಕಾರ್ಕಳದಲ್ಲಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧವೇ ತನ್ನ ಸ್ಪರ್ಧೆ ಎಂದು ಈಗಾಗಲೇ ಮುತಾಲಿಕ್ ಘೋಷಣೆ ಮಾಡಿದ್ದು,ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಬಣಗಳ ವಾಕ್ಸಮರ ತಾರಕಕ್ಕೇರಿದೆ. ಈ ನಡುವೆ ಕಾಂಗ್ರೆಸ್ ಮಾತ್ರ ಇನ್ನೂ ತನ್ನ ಅಭ್ಯರ್ಥಿ ಅಂತಿಮಗೊಳಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಅಸಮಾಧಾನ ಹೆಚ್ಚುವಂತೆ ಮಾಡಿದೆ.