ಕಾರ್ಕಳ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಸ್ತ್ರೀ- ಸ್ಥಿತ್ಯಂತರ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ಎಸ್.ವಿ.ಟಿ ಯಲ್ಲಿ ನಡೆಯಿತು.

ಡಾ. ನಂದಾ ಪೈ ಅವರು ಉಪನ್ಯಾಸ ನೀಡಿ, ಹಿಂದೆ ಸಾರ್ವತ್ರಿಕ ಶಿಕ್ಷಣ ಇಲ್ಲದಿದ್ದರೂ ಯೋಗ್ಯ ಶಿಕ್ಷಣ ಮನೆಯಲ್ಲಿಯೇ ದೊರೆಯುತ್ತಿತ್ತು. ಪಾರಂಪರಿಕ ಜ್ಞಾನವಿರುತಿತ್ತು. ಆ ಬಳಿಕ ಆಧುನಿಕ ಶಿಕ್ಷಣಕ್ಕೆ ಸಮಾಜ ತೆರೆದುಕೊಂಡಿತು. ಹಿಂದಿನ ಹೆಣ್ಣುಮಕ್ಕಳ ದೈಹಿಕ ಸಾಮರ್ಥ್ಯ, ಅಂತಃಸತ್ವ ,ತಾಳ್ಮೆ ಇಂದಿನ ಹೆಣ್ಣು ಮಕ್ಕಳಲ್ಲಿ ಕಾಣಿಸುತ್ತಿಲ್ಲ.ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ಅವರು ಆಕಾಶದೆತ್ತರಕ್ಕೆ ಏರಿದರೂ ಕಾಲು ನೆಲದ ಮೇಲೆ ಇರುವಂತಹ ಶಿಕ್ಷಣ ನೀಡಬೇಕು. ಸ್ವಾತಂತ್ರö್ಯ ಸ್ವೇಚ್ಛಾಚಾರವಾಗಬಾರದೆಂಬ ಜಾಗೃತಿ ಸಮಾಜಕ್ಕೆ ಇರಬೇಕು ಎಂದರು.

ಜಾಗೃತಿಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ ,ಸುಲೋಚನ ತಿಲಕ್ ವಂದಿಸಿದರು. ಗಾಯತ್ರಿ ವಿಜಯೇಂದ್ರ ಪ್ರಾರ್ಥಿಸಿ ಇಂದಿರಾ ಕೆ, ನಿರೂಪಿಸಿದರು.

