ಕಾರ್ಕಳ: ಕಾರ್ಕಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘ ಇವರ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ವಾರ್ಷಿಕೋತ್ಸವವು ಮಾರ್ಚ್ 11ರಂದು ಕಾರ್ಕಳದ ರಾಧಾಕೃಷ್ಣ ಸಭಾಂಗಣದಲ್ಲಿ ಜರುಗಿತು.
ಸಚಿವ ವಿ.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು

ಕಾರ್ಯಕ್ರಮದಲ್ಲಿ 7ನೇ ತರಗತಿಯ 27 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 10ನೇ ತರಗತಿಯ 25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದ್ವಿತೀಯ ಪಿಯುಸಿಯ 14 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಐವರು ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ 8 ನಿವೃತ್ತ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಓರ್ವ ಸಹಾಯಕಿಗೆ ಮರಣ ಪರಿಹಾರ ವಿತರಿಸಲಾಯಿತು. 6 ಮಂದಿ ಅಂಗನವಾಡಿ ಸಹಾಯಕಿಯರಿಗೆ ಆರೋಗ್ಯ ನಿಧಿ ಹಾಗೂ ಶ್ರೀಮತಿ ವಾಣಿ ಮತ್ತು ಶ್ರೀಮತಿ ವಸಂತಿ ರವರ ಸಾಧನೆಗೆ ಗೌರವ ಜಿಲ್ಲಾ ಪ್ರಶಸ್ತಿ ಪಡೆದ ಸಾಕಮ್ಮ ಇವರಿಗೆ ಗೌರವ ಸಮರ್ಪಣೆ ನೆರವೇರಿತು.

ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಕಾರ್ಯಕರ್ತೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
