ಕಾರ್ಕಳ: ಕಾರ್ಕಳದ ಅನೆಕೆರೆ ಮಸೀದಿಯ ಬಳಿ ಇರುವ ಅಪಾಯಕಾರಿ ಬೃಹದಾಕಾರದ ಮರದ ಟೊಂಗೆಗಳನ್ನು ತರೆವುಗೊಳಿಸುವ ಕಾರ್ಯ ಅರಣ್ಯ ಇಲಾಖೆಯ ನೇತೃತ್ವದಲ್ಲಿ ನಡೆಯಿತು.
ಪ್ರತಿನಿತ್ಯ ನೂರಾರು ವಾಹನಗಳು ಮತ್ತು ಸಾವಿರಾರು ಮಂದಿ ನಾಗರಿಕರು ಸಂಚರಿಸುವ ರಸ್ತೆಯ ಪಕ್ಕದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಮರದ ಬಗ್ಗೆ ಸಾರ್ವಜನಿಕರು ಪುರಸಭೆ ಮತ್ತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸುಮಾರು 25ಕ್ಕೂ ಹೆಚ್ಚು ಕಾರ್ಮಿಕರು ಅಪಾಯಕಾರಿ ಟೊಂಗೆಗಳ ತೆರವು ಕಾರ್ಯಾಚರಣೆ ನಡೆಸಿದರು.
ಮೆಸ್ಕಾಂ ಇಲಾಖೆಯ ಸಿಬಂದಿಗಳು ಮತ್ತು ಪುರಸಭಾ ಸದಸ್ಯ ಶುಭದರಾವ್ ಸಹಕರಿಸಿದರು.