Share this news

ಕಾರ್ಕಳ :ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ 77ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಟೀಮ್ ರೈಡಿಂಗ್ ವರ್ಲ್ಡ್ ಕಾರ್ಕಳ ತಂಡದ ಉದ್ಘಾಟನಾ ಸಮಾರಂಭ ಹಾಗೂ ಎ ಎನ್ ಎಫ್ ಟೀಮ್ ವತಿಯಿಂದ ಕಮ್ಯುನಿಟಿ ಸರ್ವಿಸ್ ಕಾರ್ಯಕ್ರಮ ನಡೆಯಿತು.
sಫೆಡರೇಷನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಿ. ಕರಾವಳಿ ಸ್ಟೋನ್ & ಕ್ರಷರ್ ಓನರ್ಸ್ ಅಸೋಸಿಯೇಷನ್ ರಿ. ನ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಧ್ವಜಾರೋಹಣ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಗೆ ದೇಣಿಗೆ ನೀಡಿ ಶುಭ ಹಾರೈಸಿದರು.

ಕಾರ್ಕಳದ ಯುವಕರಿಂದ ಹೊಸದಾಗಿ ಪ್ರಾರಂಭವಾದ ಟೀಮ್ ರೈಡಿಂಗ್ ವರ್ಲ್ಡ್ ಕಾರ್ಕಳ ತಂಡದ ಉದ್ಘಾಟನೆಯನ್ನು ವಿಜೇತ ವಿಶೇಷ ಶಾಲಾ ದೇವರ ಮಕ್ಕಳು ಕೇಕ್ ಕತ್ತರಿಸಿ ಟೀಮ್ ಪ್ರೇಮ್ ಅನಾವರಣಗೊಳಿಸಿ ಹೂಡಿಸ್ ಅನಾವರಣ ಮೂಲಕ ತಂಡದ ಉದ್ಘಾಟನೆಯನ್ನು ನೆರವೇಸಿದರು

ಮುಖ್ಯ ಅತಿಥಿಗಳಾಗಿ ಛತ್ರಪತಿ ಫೌಂಡೇಶನ್ ಅಧ್ಯಕ್ಷರು ಮೆಸ್ಕಾಂ ಅಕೌಂಟ್ಸ್ ಆಫೀಸರ್ ಗಿರೀಶ್ ರಾವ್, ಪ್ರೇಮ್ ರೆಸ್ಕಿನ್ಹಪ್ರಸಿದ್ಧ ಯುಟ್ಯೂಬರ್ ಸ್ಟೀರಿಯೋ ಕ್ಯಾಟ್ ಮೋಟೋವ್ಲಗ್ಸ್, ಸುದೀಪ್ ವಿ ಶೆಟ್ಟಿ ಕರಾವಳಿ ಪೀಪಲ್ ಪೇಜ್, ಚೇತನ್ ಕುಮಾರ್ ಶೆಟ್ಟಿ ಕರಾವಳಿ ಪೀಪಲ್ ಪೇಜ್, ರವಿಚಂದ್ರನ್ ಕರಾವಳಿ ಪೀಪಲ್ ಪೇಜ್ ಟೀಮ್ ಬೈಕರ್ಸ್ ಕಾರ್ಕಳ ತಂಡದ ಅಡ್ಮಿನ್,ಸುನೀಲ್ ಆಚಾರ್ಯ, ಆದರ್ಶ್ ಆಚಾರ್ಯ ,ಸಂದೇಶ್ ಕಟಪಾಡಿ ಉಡುಪಿ ಸ್ಪಂದನ ಟಿವಿ ಪಾಟ್ನರ್, ಶಾಲಾ ಹಿತೈಷಿಗಳಾದ ಪ್ರವೀಣ್ ಸುವರ್ಣ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷೆ ಲಯನ್ ಜ್ಯೋತಿ ರಮೇಶ್, ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ,ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಮ್ಯಾನೇಜಿoಗ್ ಟ್ರಸ್ಟಿ ಹರೀಶ್, ಟ್ರಸ್ಟಿ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

ಎ ಎನ್ ಎಫ್ ಸಬ್ ಇನ್ಸ್ಪೆಕ್ಟರ್ ರವಿ ಪೊಲೀಸ್ ಪಾಟೀಲ್ ಹಾಗೂ ತಂಡದಿAದ ಕಮ್ಯುನಿಟಿ ಸರ್ವೀಸ್ ಕಾರ್ಯಕ್ರಮದ ಪ್ರಯುಕ್ತ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಸಿಹಿತಿಂಡಿಯನ್ನು ಹಸ್ತಾಂತರಿಸಿದರು .
ಹೆಡ್ ಕಾನ್ಸ್ಟೇಬಲ್ ಶ್ರೀ ಮುರುಗೇಂದ್ರ , ಮನೋಜ್ ಪರಶುರಾಮ ಬಂಡಿ, ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳ ಪೋಷಕರು ಶಾಲಾ ಹಿತೈಷಿಗಳು ಉಪಸ್ಥಿತರಿದ್ದರು.
ಸುಮಾರು 60 ಜನ ಬೈಕರ್ಸ್ ಆಟದ ಮೈದಾನದಲ್ಲಿ 5 ಸುತ್ತು ಬೈಕ್ ರ‍್ಯಾಲಿ ನಡೆಸಿ ಮಕ್ಕಳನ್ನು ಮನರಂಜಿಸಿದರು. ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಡಾ. ಕಾಂತಿ ಹರೀಶ್ ಸ್ವಾಗತಿಸಿ, ಕು.ಸುಪ್ರೀತಾ ವಂದಿಸಿದರು.ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *