Share this news
ಕಾರ್ಕಳ: ಜ.18 ರಿಂದ 22 ರವರೆಗೆ ನಡೆಯಲಿರುವ ಕಾರ್ಕಳ ಆನೆಕೆರೆ ಚತುರ್ಮುಖ ಕೆರೆಬಸದಿಯ ಪಂಚಕಲ್ಯಾಣ ಮಹೋತ್ಸವಕ್ಕೆ ಬರುವ ಭಕ್ತಾದಿಗಳು ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಕೆಳಗೆ ನಿಗದಿಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ದ್ವಿಚಕ್ರ ವಾಹನ  ನಿಲುಗಡೆ:
1. ಅರಮನೆ ಮೈದಾನ
2. ಪಟ್ಣ ಶೆಟ್ಟಿ, ಮೈದಾನ
3. ಅಯೋಧ್ಯಾ ನಗರ (ಸದಾನಂದ ಕಾಮತ್ ರಸ್ತೆ)
ಕಾರುಗಳ ಹಾಗೂ ಇತರೇ ವಾಹನಗಳ ಪಾರ್ಕಿಂಗ್ ಮಾಹಿತಿ:
1. ಮಂಗಳೂರಿನಿಂದ –  ಮೂಡುಬಿದಿರೆ ರಸ್ತೆಯಾಗಿ ಬರುವ ವಾಹನಗಳಿಗೆ 
ಬೆಳುವಾಯಿ – ಬೈಪಾಸ್ ರಸ್ತೆಯಾಗಿ ಆನೆಕೆರೆ ಅರಮನೆ ಮೈದಾನದಲ್ಲಿ ಪಾರ್ಕಿಂಗ್.
2. ಮಂಗಳೂರಿನಿಂದ –  ಪಡುಬಿದ್ರೆ ರಸ್ತೆಯಾಗಿ ಬರುವ ವಾಹನಗಳಿಗೆ 
ನಿಟ್ಟೆ – ಕುಂಟಲ್ಪಾಡಿ ರಸ್ತೆ ಮೂಲಕ – ಕೃಷ್ಣ ಕ್ಷೇತ್ರ ಆನೆಕೆರೆ ಕೂಡುವ ರಸ್ತೆಯಿಂದ – 
ಆನೆಕೆರೆ ಅರಮನೆ ಮೈದಾನದಲ್ಲಿ ಪಾರ್ಕಿಂಗ್.
3. ಉಡುಪಿಯಿಂದ –  ಬೈಲೂರು ರಸ್ತೆಯಾಗಿ ಬರುವ ವಾಹನಗಳಿಗೆ 
ಜೋಡುರಸ್ತೆ – ಬಂಗ್ಲೆಗುಡ್ಡೆ ತಿರುವಿನಿಂದ ರೋಟರಿ ಹಾಸ್ಪಿಟಲ್ ಹೈವೆ ಮಾರ್ಗವಾಗಿ – ಆನೆಕೆರೆ ಅರಮನೆ ಮೈದಾನದಲ್ಲಿ ಪಾರ್ಕಿಂಗ್.
4. ಹೆಬ್ರಿ – ಮುನಿಯಾಲು – ವರಂಗ – ಅಜೆಕಾರು ರಸ್ತೆಯಾಗಿ ಬರುವ ವಾಹನಗಳಿಗೆ 
ಜೋಡುರಸ್ತೆ – ಬಂಗ್ಲೆಗುಡ್ಡೆ ತಿರುವಿನಿಂದ ರೋಟರಿ ಹಾಸ್ಪಿಟಲ್ ಹೈವೆ ಮಾರ್ಗವಾಗಿ – ಆನೆಕೆರೆ ಅರಮನೆ ಮೈದಾನದಲ್ಲಿ ಪಾರ್ಕಿಂಗ್.
5. ಹೊರನಾಡು, ಕಳಸ ಮೂಲಕ ಬರುವ ವಾಹನಗಳಿಗೆ 
ಬಜಗೋಳಿ ಮಾರ್ಗವಾಗಿ ಬೈಪಾಸ್ ಮೂಲಕ – ಆನೆಕೆರೆ ಅರಮನೆ ಮೈದಾನದಲ್ಲಿ ಪಾರ್ಕಿಂಗ್.
6. ಬೆಳ್ತಂಗಡಿ – ಬಜಗೋಳಿ ಮೂಲಕ ಬರುವ ಎಲ್ಲಾ ವಾಹನಗಳಿಗೆ 
ಗೊಮ್ಮಟ ಬೆಟ್ಟ ತಿರುವು ರಸ್ತೆಯಿಂದ –  ದಾನಶಾಲೆ ಪಟ್ಣ ಶೆಟ್ಟಿ ಮೈದಾನ, ಮಠದ ಗದ್ದೆ, –    ಬಾಹುಬಲಿ ಪ್ರವಚನ ಮಂದಿರದ ವಠಾರ, ಅಯೋಧ್ಯ ನಗರ (ಸದಾನಂದ ಕಾಮತ್ ರಸ್ತೆ) – ನಾಲ್ಕು ಕಡೆಗಳಲ್ಲಿ ಪಾರ್ಕಿಂಗ್.
7. ಶಿರ್ಲಾಲು – ಮುಂಡ್ಲಿ – ತೆಳ್ಳಾರು ಕಡೆಯಿಂದ ಬರುವ ಎಲ್ಲಾ ವಾಹನಗಳಿಗೆ ಅನಂತಶಯನ ರಸ್ತೆ ಮೂಲಕ ಚತುರ್ಮುಖ ಬಸದಿಯ ಬಳಿ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆನೆಕೆರೆ ಬಸದಿ ಸಮಿತಿ ಕಾರ್ಯಾಧ್ಯಕ್ಷ ಮಹಾವೀರ್ ಹೆಗ್ಡೆ ಹಾಗೂ ವಾಹನ ಪಾರ್ಕಿಂಗ್ ಸಮಿತಿ ಸಂಚಾಲಕರಾದ ಅಭಿನಂದನ್ ಜೈನ್ ಮತ್ತು ಪವನ್ ಜೈನ್ ನಲ್ಲೂರು ತಿಳಿಸಿದ್ದಾರೆ.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *