ಕಾರ್ಕಳ : ಆಸ್ತಿಯಲ್ಲಿ ಪಾಲು ಕೊಡುವಂತೆ ದಂಪತಿಗಳಿಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಮಂಗಳಪಾದೆ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮಂಗಳಪಾದೆ ನಿವಾಸಿಗಳಾದ ಶಕುಂತಳಾ ಹಾಗೂ ಅವರ ಪತಿ ಬಾಲಕೃಷ್ಣ ಪೂಜಾರಿ ಹಲ್ಲೆಗೊಳಗಾದವರು. ಬಾಲಕೃಷ್ಣ ಪೂಜಾರಿ ಅವರ ಮೊದಲ ಪತ್ನಿಯ ಪುತ್ರ ನಿತೇಶ್ ಆತನ ಪತ್ನಿಯೊಂದಿಗೆ ಮಂಗಳಪಾದೆಯ ತಂದೆಯ ಮನೆಗೆ ಆಗಾಗ ಬಂದು ಆಸ್ತಿಯಲ್ಲಿ ಪಾಲು ಕೊಡುವಂತೆ ತಕರಾರು ತೆಗೆಯುತ್ತಿದ್ದು, ಮಂಗಳವಾರ ರಾತ್ರಿ ನಿತೇಶ್ ಪತ್ನಿ ದೀಪಾ ಹಾಗೂ ರೋಶನ್ ಎಂಬವರೊAದಿಗೆ ಶಕುಂತಳಾ ಅವರ ಮನೆಗೆ ಬಂದು ಆಸ್ತಿಯಲ್ಲಿ ಪಾಲು ಕೊಡದಿದ್ದರೆ ನಿಮ್ಮಿಬ್ಬರನ್ನು ಕೊಚ್ಚಿ ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿ, ಶಕುಂತಳಾ ಹಾಗೂ ಬಾಲಕೃಷ್ಣ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಶಕುಂತಳಾ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.