ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳದ ಮಿಯ್ಯಾರು ಲವ ಕುಶ ಜೋಡುಕರೆ ಕಂಬಳಕ್ಕೆ ಜ.06 ರಂದು ಶನಿವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕಂಬಳ ಸಮಿತಿ ಅಧ್ಯಕ್ಷ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ ಸುನೀಲ್ ಕುಮಾರ್ ಕಂಬಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಿಯ್ಯರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಮಿಯ್ಯಾರು ಚರ್ಚ್ ಧರ್ಮ ಗುರು ಪೌಲ್ ರೇಗೊ ಕಂಬಳದ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಮಿಯ್ಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸನ್ಮತಿ ನಾಯಕ್, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜೀವನ ದಾಸ್ ಅಡ್ಯಂತಾಯ, ಸಂಘಟನ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ , ಕೋಶಾಧಿಕಾರಿ ಶ್ಯಾಮ್ ಎನ್ ಶೆಟ್ಟಿ, ಸಹ ಕೊಶಾಧಿಕಾರಿ ರವೀಂದ್ರ ಕುಮಾರ್, ಕಾರ್ಯದರ್ಶಿ ದಯಾನಂದ ಬಂಗೇರ , ಸಹ ಕಾರ್ಯದರ್ಶಿ ಪ್ರಕಾಶ್ ಬಲಿಪ , ಉಪಾಧ್ಯಕ್ಷರುಗಳಾದ
ಸುನೀಲ್ ಕುಮಾರ್ ಬಜಗೋಳಿ,
ಅಂತೋನಿ ಡಿಸೋಜ, ಶಾಂತಿರಾಜ್ ಜೈನ್, ಉದಯ ಎಸ್ ಕೋಟ್ಯಾನ್, ಕೆ ಶ್ಯಾಮ ಶೆಟ್ಟಿ, ಪುರಸಭಾ ಸದಸ್ಯರು ಗಳಾದ ಶುಭದ ರಾವ್ ,ಅವಿನಾಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಮಾಧವ ಕಾಮತ್, ಎಂ ಜಯರಾಮ್ ಪ್ರಭು, ಜೆರಾಲ್ಡ್ ಡಿ ಸಿಲ್ವ, ಉಮೇಶ್ ರಾವ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ