ಕಾರ್ಕಳ: ಕಸಬಾ ಗ್ರಾಮದ ಮಾರ್ಕೆಟ್ ರಸ್ತೆಯ ಉಚ್ಚಂಗಿನಗರ ಎಂಬಲ್ಲಿ ಭಾನುವಾರ ಅಂದರ್ ಬಾಹರ್ ಆಟವಾಡುತ್ತಿದ್ದ ಮಾಹಿತಿ ಪಡೆದು ಕಾರ್ಕಳ ನಗರ ಠಾಣೆಯ ಎಸ್ ಐ ಸಂದೀಪ್ ಶೆಟ್ಟಿ ದಾಳಿ ನಡೆಸಿ ಜುಗಾರಿಯಲ್ಲಿ ನಿರತರಾಗಿದ್ದ ಐವರನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ.
ಜುಗಾರಿಯಲ್ಲಿ ನಿರತರಾಗಿದ್ದ ಮುರಳಿ (40), ಪ್ರದೀಪ (35), 3)ಸುಕೇಶ (30) ರಕ್ಷಿತ್ (34) ಹಾಗೂ ಶಿವಣ್ಣ (60) ಎಂಬವರನ್ನು ವಶಕ್ಕೆ ಪಡೆದು ಆಟಕ್ಕೆ ಬಳಸಿದ 5,200 ರೂ ನಗದು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
