ಕಾರ್ಕಳ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು (ಆಗಸ್ಟ್ 29) ಸೊರಬದಿಂದ ಕಾರ್ಕಳ ಮಾರ್ಗವಾಗಿ ಮೂಡಬಿದ್ರೆ ತೆರಳುವ ವೇಳೆ ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾದರು.
ಕಾರ್ಕಳದ ಸರ್ವಜ್ಞ ವೃತ್ತದ ಬಳಿಯ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ ಕೋಟ್ಯಾನ್, ಸಿರಿಯಣ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತೊಲಿನೋ, ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಡಿ .ಆರ್ ರಾಜು, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮುಡಾರು, ಪುರಸಭಾ ಮಾಜಿ ಅಧ್ಯಕ್ಷ ಸುಭಿತ್ ಎನ್ ಆರ್, ತಾ.ಪಂ ಮಾಜಿ ಅಧ್ಯಕ್ಷೆ ಯಶೋಧಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅನಿತಾ ಡಿಸೋಜಾ,ಸದಾಶಿವ ದೇವಾಡಿಗ, ಪ್ರತಿಮಾ ರಾಣೆ ,ಆರೀಫ್ ಕಲ್ಲೊಟ್ಟೆ,ಸುನಿಲ್ ಭಂಡಾರಿ, ಸುಭೀತ್ ಎನ್.ಆರ್, ರೆಹಮತ್ ಶೇಖ್, ಕಾಂತಿ ಶೆಟ್ಟಿ, ಶೋಭಾ ಜೈನ್,ವಿವೇಕಾನಂದ ಶೆಣೈ ಮೊದಲಾದವರು ಉಪಸ್ಥಿತರಿದ್ದರು.